ಎ.10,11 : ಪೆರುವಾಜೆ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ,ಚಂಡಿಕಾ ಹೋಮ

0

108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ – ಶ್ರೀ ಸತ್ಯನಾರಾಯಣ ಪೂಜೆ

ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಚಂಡಿಕಾ ಹೋಮ,108 ನಾಳಿಕೇರ ಗಣಪತಿ ಹವನ,ಮೂಡಪ್ಪ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಎ.10 ಮತ್ತು ಎ.11 ರಂದು ನಡೆಯಲಿದೆ.
ಎ.10 ರಂದು ರಾತ್ರಿ ಗಂಟೆ 7.00 ಕ್ಕೆ ದೇವತಾ ಪ್ರಾರ್ಥನೆ,ಆಚಾರ್ಯವರಣ,ಸ್ವಸ್ತಿ ಪುಣ್ಯಾಹವಾಚನ,ಪ್ರಾಸಾದ ಶುದ್ಧಿ,ರಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಪೂಜಾ ಬಲಿ,ಮಹಾಪೂಜೆ,ಗಣಪತಿ ದೇವರಿಗೆ ಮೂಡಪ್ಪ ಸೇವೆ ಮತ್ತು ರಂಗಪೂಜೆ ,ಪ್ರಸಾದ ವಿತರಣೆ ನಡೆಯಲಿದೆ.
ಎ.11 ರಂದು ಬೆಳಿಗ್ಗೆ ಗಂಟೆ 7.30 ರಿಂದ 108 ತೆಂಗಿನಕಾಯಿ ಮಹಾಗಣಪತಿ ಹೋಮ,ಚಂಡಿಕಾಹೋಮ,ಶ್ರೀ ಸತ್ಯನಾರಾಯಣ ಪೂಜೆ,ಬಿಂಬ ಶುದ್ಧಿ, ಪಂಚವಿಂಶತಿ ಕಲಶ ಪೂಜೆ,ಬೆಳಿಗ್ಗೆ ಗಂಟೆ 11.00 ಕ್ಕೆ ಹೋಮದ ಪೂರ್ಣಾಹುತಿ,ಸುವಾಸಿನಿ ಪೂಜೆ ನಡೆಯಲಿದೆ.
ಮಧ್ಯಾಹ್ನ ಶ್ರೀ ದೇವರಿಗೆ ಪಂಚಾಮೃತಾಭಿಷೇಕ,ಪಂಚವಿಂಶತಿ ಕಲಶಾಭುಷೇಕ,ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.

ವಿ.ಸೂ : ಮಹಾಚಂಡಿಕಾ ಹೋಮ,108 ನಾಳಿಕೇರ ಗಣಪತಿ ಹವನ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮಾಡಿಸುವವರು ರೂ.250.00 ಹಾಗೂ ಮೂಡಪ್ಪ ಸೇವೆ ಮಾಡಿಸುವವರು ರೂ.100.00 ದೇವಳದ ಕಚೇರಿಯಲ್ಲಿ ಪಾವತಿಸಿ ರಶೀದಿ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.