ಗುರುಂಪು : ಬರೆಕುಸಿತ ಉಂಟಾಗಿ ಮೂವರು ಕೂಲಿ ಕಾರ್ಮಿಕರು ಮೃತಪಟ್ಟ ಘಟನೆ ಆರೋಪಿಗಳನ್ನು ದೋಷ ಮುಕ್ತಗೊಳಿಸಿದ ಸುಳ್ಯ ನ್ಯಾಯಾಲಯ

0

ಸುಳ್ಯ ಗುರುಂಪಿವಿನಲ್ಲಿ ಮನೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಬರೆಕುಸಿತ ಉಂಟಾಗಿ ಉತ್ತರ ಕರ್ನಾಟಕ ಮೂಲದ ಮೂವರು ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿ ಆರೋಪಿಗಳಿಗೆ ಸುಳ್ಯ ಹಿರಿಯ ನ್ಯಾಯಾಲಯ ದೋಷ ಮುಕ್ತಗೊಳಿಸಿ ಆದೇಶ ನೀಡಿದೆ.

ಗುರುಂಪು ಅಬೂಬಕ್ಕರ್ ಎಂಬುವರ ಮನೆಯ ಹಿಂಭಾಗದಲ್ಲಿ 2023 ಮಾರ್ಚ್ 25 ರಂದು ಮಧ್ಯಾಹ್ನ ಸುಮಾರು 12:45ಕ್ಕೆ ತಡೆಗೋಡೆ ಕೆಲಸ ನಡೆಯುತ್ತಿದ್ದ ಸಂದರ್ಭ ಪಕ್ಕದಲ್ಲಿದ್ದ ಬೃಹತ್ ಬರೆ ಏಕಾಏಕಿ ಕುಸಿತ ಉಂಟಾಗಿ ಉತ್ತರ ಕರ್ನಾಟಕ ಮೂಲದ ಓರ್ವ ಮಹಿಳೆ ಸೇರಿದಂತೆ ಇಬ್ಬರು ಕೂಲಿ ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದರು. ಮೃತಪಟ್ಟವರು ಸೋಮಶೇಖರ ರೆಡ್ಡಿ, ಶಾಂತವ್ವ, ಹಾಗೂ ಚಂದ್ರಪ್ಪ ರವರಾಗಿದ್ದು ಈ ಬಗ್ಗೆ ಮೃತ ಸೋಮಶೇಖರ ರೆಡ್ಡಿರವರ ಸಹೋದರ ಮಾಲತೇಶ್ ರೆಡ್ಡಿ ಎಂಬುವವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಂದಿನ ತನಿಖಾ ವಿಭಾಗದ ಎಸ್ ಐ ಸೈಯದ್ ಅಫ್ರಿದಿ ರವರು ಮನೆಯ ಮಾಲಕ ಅಬೂಬಕರ್, ಹಾಗೂ ಕಂಟ್ರಾಕ್ಟರ್ ನಾಗರಾಜ ಮೇಸ್ತ್ರಿ ಜಯನಗರ, ಇಂಜಿನಿಯರ್ ವಿಜಯಕುಮಾರ್ ಅವರ ವಿರುದ್ಧ ಅ ಕ್ರಂ 30/23 ಕಲಂ 304(A) ಐಪಿಸಿಯಂತೆ ಪ್ರಕರಣ ದಾಖಲಿಸಿ ಸುಳ್ಯ ಹಿರಿಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಹಿರಿಯ ನ್ಯಾಯಾಲಯದ ನ್ಯಾಯಾಧೀಶರು ಮೋಹನ್ ಬಾಬು ರವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಆರೋಪ ಸಾಬೀತು ಪಡಿಸುವಲ್ಲಿ ಅಭಿಯೋಜಕರು ವಿಫಲ ಗೊಂಡಿದ್ದಾರೆ ಎಂಬ ಕಾರಣವನ್ನು ಸೂಚಿಸಿ ಪ್ರಕರಣದ ಮೂವರು ಆರೋಪಿಗಳನ್ನು ಏಪ್ರಿಲ್ 20 ರಂದು ದೋಷ ಮುಕ್ತ ಗೊಳಿಸಿ ಆದೇಶನೀಡಿದೆ.
ಆರೋಪಿಗಳ ಪರವಾಗಿ ಸುಳ್ಯದ ಹಿರಿಯ ವಕೀಲರಾದ ಎಂ ವೆಂಕಪ್ಪಗೌಡ, ಚಂಪಾ ವೆಂಕಪ್ಪಗೌಡ, ರಾಜೇಶ್,ಶಾಮ್ ಪ್ರಸಾದ್,ವಾದ ಮಂಡಿಸಿದ್ದಾರೆ.