ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ವತಿಯಿಂದ ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ

0

ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಆಡಳಿತ ಸಮಿತಿ ವತಿಯಿಂದ ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲಿರುವ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಬೈತಡ್ಕ ಇದರ ಕೋಶಾಧಿಕಾರಿ ಯಾಗಿರುವ ಇಕ್ಬಾಲ್ ಪಿ.ಬಿ ಹಾಗೂ ನುಸ್ರತುಲ್ ಇಸ್ಲಾಂ ಮದ್ರಸ ಸಮಹಾದಿ ಇದರ ಮಾಜಿ ಅಧ್ಯಕ್ಷರು ಹಾಗೂ ಜಮಾಅತ್ ನ ಹಿರಿಯ ವ್ಯಕ್ತಿ ಹಸನ್ ಕುಂಞಿ ಸಮಹಾದಿಯವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷರಾದ ಸಾದಿಕ್ ಸಮಹಾದಿ ವಹಿಸಿದ್ದರು.

ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಆಡಳಿತ ಸಮಿತಿ ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ ಯವರು ಸ್ವಾಗತ ಭಾಷಣ ಮಾಡಿದರು.
ಮಸೀದಿ ಖತೀಬರಾದ ಬಹು|ರಫೀಕ್ ನಿಝಾಮಿ ಉಸ್ತಾದ್ ರು ಸಭಿಕರನ್ನು ಉದ್ದೇಶಿಸಿ ಮಾತನಾಡಿ ದುವಾಃ ನೆರವೇರಿಸಿದರು.
ಹಾಗೂ ಹಜ್ ಯಾತ್ರಾರ್ಥಿಗಳಾದ ಹಸನ್‌ಕುಂಞಿ ಸಮಾದಿ ಹಾಗೂ ಇಕ್ಬಾಲ್ ಪಿ.ಬಿ ರವರು ಸಭಿಕರನ್ನು ಉದ್ದೇಶಿಸಿ ಮಾತನಾಡಿ ಪ್ರಾರ್ಥಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಜುಮ್ಮಾ ಮಸ್ಜಿದ್ & ದರ್ಗಾ ಶರೀಫ್ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಕೆಲೆಂಬಿರಿ ಸಮಿತಿ ಸದಸ್ಯರಾದ ಮಹಮ್ಮದ್ ಅಲೆಕ್ಕಾಡಿ,ಆದಂ ಹಾಜಿ ಅಬೀರಾ, ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಉಪಾಧ್ಯಕ್ಷ ಆದಂ,ಕೋಶಾಧಿಕಾರಿ ಉಮ್ಮರ್ ಫಾರೂಕ್ ರಾಗಿಪೇಟೆ,ಪ್ರ.ಕಾರ್ಯದರ್ಶಿ ಫಲುಲ್ ರಾಗಿಪೇಟೆ, ಸಮಿತಿ ಸದಸ್ಯರಾದ ಪಿ.ಎಂ ಅಬ್ದುಲ್ ರಹ್ಮಾನ್,ಸಾಬುಕುಂಞಿ ಹುದೇರಿ,ಸೈಫುದ್ದೀನ್,ಮುಸ್ತಫಾಮಾಮು ಸಮಾದಿ ಸೇರಿದಂತೆ ಜಮಾಅತ್‌ನ ಹಲವಾರು ಸದಸ್ಯರು ಉಪಸ್ಥಿತರಿದ್ದರು.