ಅಡ್ಕಾರು: ಡ್ರೀಮ್ ಲೆನ್ಸ್ ಸ್ಟುಡಿಯೋ ಶುಭಾರಂಭ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಕರಾವಳಿ ಹೋಟೆಲ್ ಮುಂಭಾಗ ಕಟ್ಟಡದಲ್ಲಿ ಯಶ್ವಿನ್ ಮೆಲ್ಸನ್ ಮತ್ತು ಜಯಾದಂದ ಶೇಷನಡ್ಕ ಅವರ ಮಾಲಕತ್ವದ ಡ್ರೀಮ್ ಲೆನ್ಸ್ ಸ್ಟುಡಿಯೋ ಎ.26ರಂದು ಶುಭಾರಂಭಗೊಂಡಿತು.

ಜಾಲ್ಸೂರಿನ ಹಿರಿಯ ಸಹಕಾರಿ ಧುರೀಣ ಜಯರಾಮ ರೈ ಜಾಲ್ಸೂರು ಹಾಗೂ ಜಾಲ್ಸೂರಿನ ಗಜಾನನ ಸ್ಟೋರ್ ಮಾಲಕ ವಿನಾಯಕ ಪ್ರಭು ಅವರು ದೀಪಬೆಳಗಿಸುವುದರ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಟ್ಟಡದ ಮಾಲಕ ಅಬ್ದುಲ್ಲ ಅಡ್ಕಾರು, ಆತ್ಮೀಯ ಗಾನನಾಯಕ್ ಸುಳ್ಯ, ಶರತ್ ಬೊಮ್ಮೆಟ್ಟಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

ಇಲ್ಲಿ ಎಲ್ಲಾ ಸಭೆ – ಸಮಾರಂಭ, ಮದುವೆ ಕಾರ್ಯಕ್ರಮಗಳಿಗೆ ಪೋಟೋ ಹಾಗೂ ವೀಡಿಯೋ ಚಿತ್ರೀಕರಣ ಹಾಗೂ ಪೋಟೋ ಮತ್ತು ವೀಡಿಯೋ ಎಡಿಟಿಂಗ್ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.