ಪೈಂಬೆಚ್ಚಾಲು ಎಸ್. ಎಸ್. ಎಫ್ ಶಾಖೆಯಲ್ಲಿ ಧ್ವಜ ದಿನಾಚರಣೆ

0

ಎಸ್. ಎಸ್. ಎಫ್ ಸ್ಥಾಪನಾ ದಿನದ ಅಂಗವಾಗಿ ಪೈಂಬೆಚ್ಚಾಲು ಶಾಖೆಯ ವತಿಯಿಂದ ಧ್ವಜ ದಿನಾಚರಣೆ ಎ.29 ರಂದು ಪೈಂಬೆಚ್ಚಾಲಿನಲ್ಲಿ ಆಚರಿಸಲಾಯಿತು.

ಶಾಖಾಧ್ಯಕ್ಷ ಅಬ್ದುನ್ನಾಸಿರ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು. ಜಮಾಅತ್ ಅಧ್ಯಕ್ಷ ಟಿ.ಎಂ.ಅಬ್ದುಲ್ ಕಾದರ್ ಧ್ವಜಾರೋಹಣ ನೆರವೇರಿಸಿದರು.


ಜಮಾಅತ್ ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಬಿ.ಎಂ. ಇಸ್ಮಾಯಿಲ್ ಸಖಾಫಿ ಉಸ್ತಾದ್ ಉದ್ಘಾಟಿಸಿದರು. ಸ್ಥಳೀಯ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ, ಡಿವಿಷನ್ ಕೋಶಾಧಿಕಾರಿ ಸಿದ್ದೀಖ್ ಹಿಮಮಿ ಸಖಾಫಿ ಶುಭಹಾರೈಸಿದರು.


ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸ್ವಾದಿಖ್ ಫಾಳಿಲಿ ಸ್ವಾಗತಿಸಿ,ವಂದಿಸಿದರು.