ಕುಕ್ಕುಜಡ್ಕ : ಕಾರು – ಬೈಕ್ ಡಿಕ್ಕಿ – ಸವಾರರಿಗೆ ಗಾಯ

0

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕ ಪದವು ಎಂಬಲ್ಲಿ ಕಾರು ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಗಾಯಗೊಂಡ ಘಟನೆ ಮೇ.25 ರಂದು ನಡೆದಿದೆ.
ಸುಳ್ಯ ಕಡೆಯಿಂದ ಕುಕ್ಕುಜಡ್ಕ ಕಡೆಗೆ ನಾಗರಾಜ ಪಿ.ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿಗೆ ಕುಕ್ಕುಜಡ್ಕ ಕಡೆಯಿಂದ ದೃಷ್ಯಂತ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಡಿಕ್ಕಿಹೊಡೆಯಿತು.


ಡಿಕ್ಕಿ ಹೊಡೆದ ರಭಸಕ್ಕೆ ಬೈಕಿನಲ್ಲಿದ್ದ ನಾಗರಾಜ ಮತ್ತು ಅವರ ಪತ್ನಿ ಗೀತಾಶ್ರೀಯವರಿಗೆ ಗಾಯವಾಗಿದ್ದು ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತೆಂದು ತಿಳಿದುಬಂದಿದೆ.
ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿದು ಬಂದಿದೆ.