ಆಲೆಟ್ಟಿ:ಪರಿವಾರಕಾನದಿಂದ ಕಲ್ಚೆರ್ಪೆವರೆಗೆ ರಾಜ್ಯ ಹೆದ್ದಾರಿ ಬದಿ ಸ್ವಚ್ಚತಾ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ ಪರಿವಾರಕಾನದಿಂದ ಅರಂಬೂರು ಕಲ್ಚೆರ್ಪೆಯ ತನಕ ರಸ್ತೆ ಬದಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಆಲೆಟ್ಟಿ ಗ್ರಾಮ ಪಂಚಾಯತ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲ್, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವಚ್ಚತೆಯಲ್ಲಿ ಕೈಜೋಡಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ, ಕಾಲೇಜಿನ ಎನ್ ಎಸ್ ಎಸ್ ಘಟಕಾಧಿಕಾರಿ ರಾಮಕೃಷ್ಣ, ಎನ್ ಎಸ್ ಎಸ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಂಚಾಯತ್ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೃಜನ್, ಆಲೆಟ್ಟಿ ಸಿ. ಎ. ಬ್ಯಾಂಕಿನ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ,
ನ.ಪಂ.ಮಾಜಿ ಸದಸ್ಯ ಗೋಕುಲದಾಸ್, ಅರಂಬೂರು ಅಂಬಿಕಾ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಅಮಿತಾ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಪುಷ್ಪಾವತಿ ಕುಡೆಕಲ್ಲು, ವೇದಾವತಿ ನೆಡ್ಚಿಲು, ಧರ್ಮಪಾಲ ಕೊಯಿಂಗಾಜೆ, ಸತ್ಯಕುಮಾರ್ ಆಡಿಂಜ, ಅರೋಗ್ಯ ಸಹಾಯಕಿ, ಲಕ್ಷ್ಮಿ, ಸಂಜೀವಿನಿ ಸಂಘದ ಸದಸ್ಯರು, ಅರಂಬೂರು ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು, ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.