ಅಮರಪಡ್ನೂರು: ಅಕ್ಕೋ ಜಿಪಾಲ್ ನಲ್ಲಿ ತಾತ್ಕಾಲಿಕ ಬಸ್ ತಂಗುದಾಣ ನಿರ್ಮಾಣ

0

ಅಮರಪಡ್ನೂರಿನ ಅಜ್ಕೋಜಿಪಾಲ್ ಎಂಬಲ್ಲಿ ರಸ್ತೆಯ ಬಲಬದಿಯಲ್ಲಿ ತಾತ್ಕಾಲಿಕ ಬಸ್ ತಂಗುದಾಣವನ್ನು ದಾನಿಯೋರ್ವರ ಸಹಕಾರದಿಂದ ನಿರ್ಮಿಸಲಾಗಿದೆ.


ಈ ಭಾಗದ ಪಂಚಾಯತ್ ಸದಸ್ಯ ರಾಧಾಕೃಷ್ಣ ಕೊರತ್ಯಡ್ಕ ರವರ ಬೇಡಿಕೆಯ ‌ಮೇರೆಗೆ ಐವರ್ನಾಡಿನ ವೇಣುಗೋಪಾಲ ಕೋಲ್ಚಾರು ರವರು ಕೊಡುಗೆಯಾಗಿ ಬಸ್ ತಂಗುದಾಣವನ್ನು ನಿರ್ಮಿಸಿಕೊಟ್ಟಿರುತ್ತಾರೆ. ಇಲ್ಲಿ ರಸ್ತೆಯ ಎಡ ಬದಿಯಲ್ಲಿ ಪಂಚಾಯತ್ ವತಿಯಿಂದ ನಿರ್ಮಿಸಿದ ತಂಗುದಾಣವಿದೆ.


ಸುಳ್ಯದ ಕಡೆಗೆ ಶಾಲೆಗೆ ಬರುವ ವಿದ್ಯಾರ್ಥಿಗಳು ನಿಲ್ಲುವುದಕ್ಕೆ ತಂಗುದಾಣವು ವಿರುದ್ದ ದಿಕ್ಕಿನಲ್ಲಿ ಇರುವುದರಿಂದ ವಾಹನಗಳು ಬರುವ ವೇಳೆಗೆ ರಸ್ತೆ ದಾಟಿ ಬರಬೇಕಾದುದರಿಂದ ಅನಾಹುತಗಳಾಗುವ ಸಾಧ್ಯತೆ ಇರುವುದನ್ನು ಗಮನಿಸಿ ಪರ್ಯಾಯ ವ್ಯವಸ್ಥೆ ತಾತ್ಕಾಲಿಕ ತಂಗುದಾಣವನ್ನು ನಿರ್ಮಿಸಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಸದುಪಯೋಗವಾಗಲಿದೆ.

ಸ್ಥಳೀಯರಾದ ಬಾಲಕೃಷ್ಣ ಬೊಳ್ಳೂರು ಮತ್ತು ಕಾವೇರಿ ಇಂಡಸ್ಟ್ರೀಸ್ ಭವಾನಿಶಂಕರ ರವರು ಸಹಕರಿಸಿದರು.