ಬೆಳ್ಳಾರೆ ಪೇಟೆಯ ಬಸ್ ನಿಲ್ದಾಣನಿಂದ ತಡಗಜೆ ಹೋಗುವ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ.















ಮಳೆಯಿಂದ ಕೊಚ್ಚಿಬಂದ ಕೆಸರು ನೀರು ಬಸ್ಟೆಂಡಿನ ಎದುರು ಭಾಗದಲ್ಲಿ ನಿಂತಿದ್ದು ಬಸ್ಸು ಪ್ರಯಾಣಿಕರಿಗೆ,ಪಾದಚಾರಿಗಳಿಗೆ ನಡೆದಾಡಲು ಕಷ್ಟಕರವಾಗಿದೆ.
ರಸ್ತೆ ಬದಿ ಅಟೊ ರಿಕ್ಷಾ ನಿಲ್ದಾಣವಿದ್ದು ಅಲ್ಲಿಯೂ ಸಮಸ್ಯೆಯಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು,ಇಲಾಖಾಧಿಕಾರಿಗಳು ನಮನಹರಿಸಬೇಕಾಗಿದೆ.


