ಅರಂತೋಡು – ತೊಡಿಕಾನ ರಸ್ತೆಯ ನೂಜಿಕಲ್ಲು ಎಂಬಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಜು.23ರಂದು ಬೆಳಿಗ್ಗೆ ಸಂಭವಿಸಿದೆ.















ನೂಜಿಕಲ್ಲು ಬಳಿ ರಸ್ತೆ ಬದಿಯಲ್ಲಿದ್ದ ಬೃಹತ್ತಾದ ಮರ ರಸ್ತೆಗೆ ಬಿದ್ದಿದ್ದು ಸ್ಥಳಕ್ಕೆ ಅರಂತೋಡಿನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಅರಣ್ಯ ಇಲಾಖೆಯವರು ತೆರಳಿದ್ದು, ಮರ ತೆರವು ಕಾರ್ಯಾಚರಣೆ ನಡೆಸಲಾಗುತ್ತಿರುವುದಾಗಿ ತಿಳಿದುಬಂದಿದೆ.









