Home Uncategorized ಅರಂಬೂರು ಮದರಸದಲ್ಲಿ ಸ್ವಾತಂತ್ರೋತ್ಸವ

ಅರಂಬೂರು ಮದರಸದಲ್ಲಿ ಸ್ವಾತಂತ್ರೋತ್ಸವ

0

ಹಿದಾಯತುಲ್ ಇಸ್ಲಾಂ ಮದರಸ ಅರಂಬೂರುನಲ್ಲಿ 78ನೇ ಸ್ವಾತಂತ್ರೋತ್ಸವ ನಡೆಯಿತು. ಸಮಿತಿಯ ಅಧ್ಯಕ್ಷರಾದ ಹಾಜಿ ಭಾಷಾ ಸಾಹೇಬ್ ಧ್ವಜಾರೋಹಣಗೈದು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಖತೀಬ್ ಉಸ್ತಾದ್ ಮೊಯಿನುದ್ದೀನ್ ಫೈಝಿಯವರು ಕಾರ್ಯಕ್ರಮ ಉದ್ಘಾಟಿಸಿದರು.


ಮದರಸದ ಹಳೆ ವಿದ್ಯಾರ್ಥಿ ಬಶೀರ್ ಅರಂಬೂರು ಸ್ವಾತಂತ್ರ್ಯ ಸಂದೇಶ ಭಾಷಣಗೈದರು. ಹಿರಿಯ ಸಾಮಾಜಿಕ ಮುಂದಾಳು ಎಸ್ ಎಂ ಬಾಪೂ ಸಾಹೇಬ್, ಅಲ್ ಅಮೀನ್ ಯೂತ್ ಫೆಡರೇಶನ್ ನ ಕಾರ್ಯದರ್ಶಿ ಆಶಿಫ್ ಪನ್ನೇ, ಮದರಸ ಮುಅಲ್ಲಿಂ ಉಸ್ತಾದರು ಮಾತನಾಡಿದರು. ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯೂಸುಫ್ ಅಂಜಿಕ್ಕರ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಂದರ್ ಅರಂಬೂರು, ಕೋಶಾಧಿಕಾರಿ ಅಬ್ದುಲ್ ಖಾದರ್, ಅಲ್ ಅಮೀನ್ ಯೂತ್ ಫೆಡರೇಶನ್ ಅಧ್ಯಕ್ಷ ಅಬ್ದುಲ್ಲ ಕುಂಞ, ಸಮಿತಿಯ ಸದಸ್ಯರುಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಕಮಾಲ್ ಎ ಬಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮದರಸ ಉಸ್ತುವಾರಿ ಅಕ್ಬರ್ ಅಲಿ ವಂದಿಸಿದರು.

NO COMMENTS

error: Content is protected !!
Breaking