ಸುಳ್ಯದ ರೈತ ಮುಖಂಡರು ಭಾಗಿ
ದ. ಕ. ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಆ. 13 ರಂದು ನಡೆದ ಜಿಲ್ಲಾ ರೈತ ಮುಖಂಡರ ಸಭೆ ಜಿಲ್ಲಾಧಿಕಾರಿಯವರು ನೇತೃತ್ವದಲ್ಲಿ ನಡೆದಿದ್ದು, ಈ ಸಭೆಯಲ್ಲಿ ಸುಳ್ಯದ ರೈತ ಮುಖಂಡರು ಭಾಗವಹಿಸಿದ್ದರು.
ಸುಳ್ಯದಿಂದ ಕ.ರಾ.ರೈತ ಸಂಘ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಕಾರ್ಯದರ್ಶಿ ಭರತ್ ಕುಮಾರ್ ಕೆ, ಮಾಧವ ಗೌಡ ಸುಳ್ಯಕೋಡಿ, ದಿವಾಕರ ಪೈ ಆರಂಬೂರು ಹಾಗೂ ಮಂಜುನಾಥ ಮಡ್ತಿಲ,ರಾಧಾಕೃಷ್ಣ ಪಾರೇಮಜಲು,ಚಂದ್ರಶೇಖರ ಬಾಳೆಕಜೆ ಸಭೆಯಲ್ಲಿ ಹಾಜರಿದ್ದು ಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಸಭೆಗೆ ಜಿಲ್ಲಾ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಜರಿದ್ದರು.








ಸಭೆಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆ, ಭೂ ಮಾಪನ ಇಲಾಖೆಯೊಂದಿಗೆ ರೈತರ ಸಮಸ್ಯೆಗಳನ್ನು ನೇರ ಸಂವಾದ ನಡೆಯಿತು.
ಅಲ್ಲದೇ 15ಕ್ಕೂ ಹೆಚ್ಚು ರೈತರ ಸಮಸ್ಯೆಗಳನ್ನು ಮನವಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ರೈತ ಮುಖಂಡರು ಹಾಗೂ ರಾಜ್ಯ ರೈತ ಮುಖಂಡರು ಹಾಜರಿದ್ದರು.
ಜಿಲ್ಲಾಧಿಕಾರಿಗಳು ಎಲ್ಲಾ ರೈತರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಕೂಡಲೇ ಸಮಸ್ಯೆಗಳಿಗೆ ಪರಿಹಾರ ಹಾಗೂ ಸರಕಾರದ ಮಟ್ಟಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.









