
ಬ್ಯಾಂಕ್ ಆಫ್ ಬರೋಡದಿಂದ ಪ್ರವರ್ತಿಸಲ್ಪಟ್ಟ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರಿಂದ ಸ್ಥಾಪಿಸಲ್ಪಟ್ಟ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇದರ ಸದಸ್ಯರು ಸೆ. 18ರಂದು ಬಳ್ಪ ಮತ್ತು ಪಂಜದ ವಿವಿಧ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿದರು.

ಬಳ್ಪದ ಪ್ರಮೋದ್ ಕುಮಾರ್ ಕೆ. ಎಸ್ ರವರ ಜಮೀನಿನಲ್ಲಿ ಬೆಳೆಸಿದ ಡ್ರ್ಯಾಗನ್ ಫ್ರೂಟ್ ಕೃಷಿ, ಪಂಜದಲ್ಲಿರುವ ವನಸಿರಿ ಫಾರ್ಮ್ ನ ದಯಾಪ್ರಸಾದ್ ಚೀಮುಳ್ಳು ರವರ ಹಣ್ಣಿನ ತೋಟ, ಪಂಜಬೀಡು ಮನೆಯ ಪ್ರಗತಿಪರ ಕೃಷಿಕ ರಜಿತ್ ಭಟ್ ಇವರ ಸಮಗ್ರ ಕೃಷಿಯ ಬಗ್ಗೆ ಸದಸ್ಯರು ಮಾಹಿತಿ ಪಡೆದುಕೊಂಡರು.

















ಸಮಿತಿಯ ವತಿಯಿಂದ ಪ್ರಮೋದ್ ಕುಮಾರ್ ಕೆ.ಎಸ್, ದಯಾಪ್ರಸಾದ್ ಚೀಮುಳ್ಳು, ರಜಿತ್ ಭಟ್ ರವರನ್ನು ಗೌರವಿಸಲಾಯಿತು.

ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ತಿರುಮಲೇಶ್ವರಿ ಅರ್ಭಡ್ಕ, ಸದಸ್ಯರು ಭಾಗವಹಿಸಿದ್ದರು.










