ಗುತ್ತಿಗಾರು ಗ್ರಾಮದ ಮೊಗ್ರ, ಮಲ್ಕಜೆ, ಕಿನ್ನಿಕುಮೇರಿ ಭಾಗದ ಸುಮಾರು 60 ಮನೆಗಳ ಸದಸ್ಯರು ಒಟ್ಟು ಸೇರಿ ರಕ್ಷಾ ನಾಗರಿಕ ಬಳಗ ಎಂಬ ಸಮಾಜಸೇವಾ ಸಂಘಟನೆಯನ್ನು ರಚನೆ ಮಾಡಿದರು.
ನೂತನ ಸಂಘಟನೆಯ ಅಧ್ಯಕ್ಷರಾಗಿ ಲಯನ್ ನಾಗೇಶ್ ಕಿನ್ನಿಕುಮೇರಿ, ಪ್ರಧಾನ ಕಾರ್ಯದರ್ಶಿಯಾಗಿ ಜೇಸಿ. ಜೀವನ್ ಮಲ್ಕಜೆ, ಖಜಾಂಚಿಯಾಗಿ ದಯಾನಂದ ಕಿನ್ನಿಕುಮೇರಿಯವರನ್ನು ಆಯ್ಕೆಮಾಡಲಾಯಿತು.















ಸಂಚಾಲಕರಾಗಿ ಲಯನ್ ಕರುಣಾಕರ ಎಣ್ಣೆಮಜಲು, ಸುಧಾಕರ ಮಲ್ಕಜೆ, ಉಮೇಶ ಮಕ್ಕಿ, ರೋ.ಮೋಹನದಾಸ್ ಎಣ್ಣೆಮಜಲು, ತಿಮ್ಮಪ್ಪ ಕಿನ್ನಿಕುಮೇರಿ, ಅಭಿಲಾಶ್ ಮಲ್ಕಜೆ, ಅವಿನಾಶ್ ಮಲ್ಕಜೆ, ಚೇತನ್, ಬೆಳ್ಯಪ್ಪ ಬಲ್ಬೇರಿ, ವಿನ್ಯಾಸ್ ಎಡೋಣಿ, ವಸಂತ ಮಲ್ಕಜೆ, ನಾಗೇಶ. ಕೆ, ಆರ್ನೂಜಿ ಕರುಣಾಕರ, ಜೇಸಿ. ಗಗನ್ ರವರುಗಳನ್ನು ನೇಮಿಸಲಾಯಿತು.

ತಮ್ಮ ಊರಿನ ರಸ್ತೆ ದುರಸ್ತಿ, ವಿದ್ಯುತ್ ಸಮಸ್ಯೆ, ಆರೋಗ್ಯ ಹಾಗೂ ಶಾಲಾ ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಶ್ರಮಿಸಿ ಅಭಿವೃದ್ಧಿಗೊಳಿಸುವ ಕನಸು ಈ ಸಂಘಟನೆಯದ್ದಾಗಿದೆ.
ಊರಿನ ಹಿರಿಯರಾದ ಕಿನ್ನಿಕುಮೇರಿ ಗುಡ್ಡಪ್ಪ ಮಾಸ್ತರ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.
ಕರುಣಾಕರ ಎಣ್ಣೆಮಜಲು ಪ್ರಾಸ್ತಾವಿಕ ಮಾತುಗಳಿಂದ ಸ್ವಾಗತಿಸಿದರು. ನಂತರ ಬಳ್ಪ ಎಡೋಣಿಯಿಂದ ಮೊಗ್ರ , ಮಲ್ಕಜೆ , ಕಿನ್ನಿಕುಮೇರಿ ಊರುಗಳಿಗೆ ರಸ್ತೆ ದುರಸ್ತಿ ಕಾರ್ಯವನ್ನು ಜೆಸಿಬಿಗಳ ಮೂಲಕ ಹಮ್ಮಿಕೊಳ್ಳಲಾಯಿತು. ಊರಿನ ಸುಮಾರು 60 ಮಂದಿ ಶ್ರಮಾದಾನದಲ್ಲಿ ಭಾಗವಹಿಸಿದ್ದರು.










