ಸೇವಾ ಚಟುವಟಿಗಳನ್ನು ಮೂಲ ಉದ್ದೇಶವಾಗಿಟ್ಟುಕೊಂಡು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ಉಬರಡ್ಕ ಮಿತ್ತೂರು ವತಿಯಿಂದ ಕುತ್ತಮೊಟ್ಟೆಯಲ್ಲಿ ಅಸೌಖ್ಯದಿಂದ ಹಾಸಿಗೆ ಹಿಡಿದಿರುವ ಬೈರ ಮತ್ತು ದೆಯ್ಯು ದಂಪತಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಪ್ರಥಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.















ಗ್ರಾಮದ ಎಲ್ಲರ ಸಹಕಾರದೊಂದಿಗೆ ಪ್ರತಿ ತಿಂಗಳು ಕನಿಷ್ಠ ಒಂದು ಸೇವಾ ಕಾರ್ಯ ನಡೆಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ರಾಹುಲ್ ನಡುಮುಟ್ಲು, ಸಂದೀಪ್ ಮದುವೆಗದ್ದೆ, ಅಪ್ಪಯ್ಯ ಸೂಂತೊಡು, ಗಿರೀಶ್ ಪಾಲಡ್ಕ ಮತ್ತು ಶ್ರೀಮತಿ ರಾಜೇಶ್ವರಿ ಉಪಸ್ಥಿತರಿದ್ದರು. ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು ಮತ್ತು ಸದಸ್ಯರಾದ ಸಂದೀಪ್ ಕುತ್ತಮೊಟ್ಟೆ ಭಾಗವಹಿಸಿದ್ದರು.









