














ಬಿಎಸ್ಎನ್ಎಲ್ ದಕ್ಷಿಣ ಕನ್ನಡ ಜಿಲ್ಲಾ ದೂರ ಸಂಪರ್ಕ ಸಲಹಾ ಸಮಿತಿ ಸದಸ್ಯರಾಗಿ ಬೆಳ್ಳಾರೆಯ ಆರ್.ಕೆ.ಭಟ್ ಕುರುಂಬುಡೇಲು (ರಾಮಕೃಷ್ಣ ಭಟ್) ನೇಮಕಗೊಂಡಿದ್ದಾರೆ. ಸುಳ್ಯ ಮಂಡಲ ಬಿಜೆಪಿ ಉಪಾಧ್ಯಕ್ಷರಾಗಿರುವ ಆರ್.ಕೆ.ಭಟ್ ರವರು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ.ದಕ್ಷಿಣ ಕನ್ನಡ ಮತ್ತು ಉಡುಪಿ ರೆವೆನ್ಯೂ ಜಿಲ್ಲೆಗಳನ್ನು ಒಳಗೊಂಡ ಸಲಹಾ ಸಮಿತಿಯ ಸದಸ್ಯರಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗಿದೆ.










