ಸುದ್ದಿ ಸುಳ್ಯ ಹಬ್ಬ ಜನರ ಹಬ್ಬವಾಗಲಿ : ಡಾ| ಯು.ಪಿ.ಶಿವಾನಂದ
ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಹಾಗೂ ಸುದ್ದಿ ಬಿಡುಗಡೆ ಪತ್ರಕೆಗೆ 40 ವರ್ಷ ತುಂಬಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಸುದ್ದಿ ಸುಳ್ಯ ಹಬ್ಬ ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಪೂರ್ವ ಭಾವಿ ಸಭೆಯು ಫೆ.3 ರಂದು ಸುಳ್ಯದ ರಂಗ ಮಯೂರಿ ಸಭಾಂಗಣದಲ್ಲಿ ನಡೆಯಿತು.















ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ| ಯು.ಪಿ.ಶಿವಾನಂದರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುದ್ದಿ ಹಬ್ಬ ಆಚರಣೆ ಕುರಿತು ಮಾತನಾಡಿ, “ಸುದ್ದಿ ಸುಳ್ಯ ಹಬ್ಬ ಜನರ ಹಬ್ಬವಾಗಬೇಕು. ಎಲ್ಲರೂ ಭಾಗವಹಿಸಬೇಕು. ಆ ನಿಟ್ಟಿನ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಎಲ್ಲರೂ ಸಹಕಾರ ನೀಡಬೇಕು” ಎಂದರು.

ಸಭೆಯಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ, ಎಂ.ಡಿ. ವಿಜಯಕುಮಾರ್, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿರ್ದೇಶಕ ಚಂದ್ರಾ ಕೋಲ್ಚಾರ್, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್, ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ಅರಭಾಷೆ ಅಕಾಡೆಮಿ ಸದಸ್ಯರುಗಳಾದ ಡಾ| ಜ್ಞಾನೇಶ್ ಎನ್.ಎ., ಲತಾ ಪ್ರಸಾದ್ ಕುದ್ಪಾಜೆ, ಅರಂತೋಡು ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ಜಾಲ್ಸೂರು ಗ್ರಾ..ಪಂ. ಮಾಜಿ ಉಪಾಧ್ಯಕ್ಷ ದಿನೇಶ್ ಅಡ್ಕಾರು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸೋಮಶೇಖರ ಕೇವಳ, ಕನಕಮಜಲು ಸೊಸೈಟಿ ಮಾಜಿ ಅಧ್ಯಕ್ಷ ಹರೀಶ ಮೂರ್ಜೆ, ಅಮರಮುಡ್ನೂರು ಗ್ರಾ.ಪಂ. ಸದಸ್ಯ ವೆಂಕಟ್ರಮಣ ಇಟ್ಟಿಗುಂಡಿ, ಸುಳ್ಯ ನಗರ ಪಂಚಾಯತ್ ಸದಸ್ಯ ಬಿ. ಉಮ್ಮರ್, ಅಲ್ಪಸಂಖ್ಯಾತ ವಿವಿಧೋದ್ದೆಶ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ಅರೆಭಾಷೆ ಕಲಾವಿದರ ಒಕ್ಕೂಟದ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಸುದ್ದಿ ಪತ್ರಿಕಾ ವಿತರಕರಾದ ಎಂ.ಎಲ್. ಪೂವಯ್ಯ, ಗಂಗಾಧರ ಕುಕ್ಕಂದೂರು, ಸಾವಿತ್ರಿ ಜಯನ್ ಅಜ್ಜಾವರ, ದೇವಿಲತಾ ಮಂಜುನಾಥ್ ಕಾಂತಮಂಗಲ,
ಬಾಲಕೃಷ್ಣ ಜೋಗಿಮೂಲೆ ಮರ್ಕಂಜ, ಬಸವರಾಜ್ ಎಸ್ ಟೊಂಗಳೆ ಸುಬ್ರಹ್ಮಣ್ಯ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಎ.ಎಂ., ಸುಮತಿ ನಾಯಕ್ ಜಯನಗರ, ನಿವೃತ್ತ ಮುಖ್ಯೋಪಾಧ್ಯಾಯ ಚಿದಾನಂದ ಯು.ಎಸ್. ಗೂನಡ್ಕ, ಸಾಮಾಜಿಕ ಧುರೀಣ ಚೆನ್ನಕೇಶವ ಜಾಲ್ಸೂರು, ವಿ 4 ನ್ಯೂಸ್ ವರದಿಗಾರ ಪುಷ್ಪರಾಜ್ ಶೆಟ್ಟಿ, ಕನಕಮಜಲು ಗ್ರಾ.ಪಂ. ಸದಸ್ಯ ಇಬ್ರಾಹಿಂ ಖಾಸಿಂ, ನ್ಯಾಯವಾದಿ ಶ್ಯಾಮ್ ಪಾನತ್ತಿಲ, ಅಜ್ಜಾವರ ಚೈತ್ರ ಯುವತಿ ಮಂಡಲಾಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ, ಶಿಕ್ಷಕಿ ಶ್ರೀಮತಿ ಹೇಮಲತಾ ಕಜೆಗದ್ದೆ, ಜಯಕೃಷ್ಣ ಕಾಯರ್ತೋಡಿ, ಆನಂದ ಪಿ.ಎಸ್., ಪ್ರೀತೇಶ್ ಶೆಟ್ಟಿ, ಹೃಷಿಕೇಶವ್, ಸುದ್ದಿ ಪ್ರತಿನಿಧಿ ರಮೇಶ್ ನಂಬಿಯಾರ್ ಚೆಂಬು, ವನಿತ ಪಿ.ಡಿ., ರಶೀದ್ ಜಟ್ಟಿಪಳ್ಳ, ಜಾಲ್ಸುರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎನ್. ಅಬ್ದುಲ್ ಮಜೀದ್ ಜಾಲ್ಸೂರು, ಗ್ಯಾರೇಜ್ ಸಂಘದ ನಾಯಕರಾದ ಮಲ್ಲೇಶ್ ಬೆಟ್ಟಂಪಾಡಿ, ಜನಾರ್ದನ ದೋಳ, ಮಹಮ್ಮದ್ ನಝೀರ್ ಶಾಂತಿನಗರ, ರಂಗಮಯೂರಿ ನಿರ್ದೇಶಕ ಲೋಕೇಶ್ ಊರುಬೈಲು, ಸೀತಾರಾಮ ಕದಿಕಡ್ಕ, ತೀರ್ಥರಾಮ ನಾಯಕ್ ಕೆ, ಗುತ್ತಿಗಾರು ಸುದ್ದಿ ಸೆಂಟರ್ ನ ಹೇಮಂತ್ ಬಾಳುಗೋಡು ಮೊದಲಾದವರಿದ್ದರು.
ಸುದ್ದಿ ಬಿಡುಗಡೆ ಸಂಪಾದಕರಾದ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಾನೆಲ್ ಮುಖ್ಯಸ್ಥರಾದ ದುರ್ಗಾಕುಮಾರ್ ನಾಯರ್‌ಕರೆ ಸ್ವಾಗತಿಸಿದರು. ಕಚೇರಿ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ ವಂದಿಸಿದರು. ಜಾಹೀರಾತು ವಿಭಾಗದ ಮುಖ್ಯರಾದ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.










