ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮುಂದಿನ ಮಾರ್ಚ್ 15,16,17 ಮತ್ತು 18 ರಂದು ನಡೆಯಲಿರುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಫೆ.4 ರಂದು ದೈವಸ್ಥಾನದ ವಠಾರದಲ್ಲಿ‌ ನೆರವೇರಿತು.

ದೈವಸ್ಥಾನದ ಕುಟುಂಬದ ಯಜಮಾನ ಹಿರಿಯರಾದ ಕುಂಞಕಣ್ಣ ಎ ರವರು ದೈವಸ್ಥಾನದ ನಡೆಯಲ್ಲಿ ಪ್ರಾರ್ಥನೆಯನ್ನು ನೆರವೇರಿಸಿದರು.

ಮಹೋತ್ಸವ ಸಮಿತಿ ರಕ್ಷಾಧಿಕಾರಿ ಹಿರಿಯ ಉದ್ಯಮಿ ಕೃಷ್ಣ ‌ಕಾಮತ್ ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಯವರು ಅಧ್ಯಕ್ಷತೆ ವಹಿಸಿ ಉತ್ಸವದ ಕುರಿತು ಪ್ರಾಸ್ತಾವಿಕಮಾತಿನೊಂದಿಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕಾರ್ಯಾಧ್ಯಕ್ಷರಾದ ಎನ್.ಎ.ರಾಮಚಂದ್ರ, ನಾರಾಯಣ ಕೇಕಡ್ಕ, ರಾಧಾಕೃಷ್ಣ ಪರಿವಾರಕಾನ, ಪದ್ಮಯ್ಯ ಪಡ್ಪು, ಕುಂಞರಾಮನ್ ಶ್ರೀ ಶೈಲಂ, ಕೆ.ಎಸ್. ಕೃಷ್ಣಪ್ಪ ಕೆದಂಬಾಡಿ, ಮಹೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಪವಿತ್ರನ್ ಗುಂಡ್ಯ,ಕೋಶಾಧಿಕಾರಿಗಳಾದ ಜತ್ತಪ್ಪ ರೈ,ರಧೀಶನ್ ಅರಂಬೂರು, ಗೌರವ ಸಲಹೆಗಾರರಾದ ಕೊರಗಪ್ಪ ಮಾಸ್ತರ್ ಕಣಕ್ಕೂರು, ಜಯಪ್ರಕಾಶ್ ಕುಂಚಡ್ಕ, ಎ.ಸಿ.ವಸಂತ,ರತ್ನಾಕರ ರೈ ಅರಂಬೂರು, ಚಂದ್ರಶೇಖರ ನೆಡ್ಚಿಲು, ಅಶೋಕ ಪೀಚೆ, ಉಮೇಶ್ ನಾಯ್ಕ್, ಜಯಪ್ರಕಾಶ್ ಅರಂಬೂರು, ಎನ್.ಎ.ಗಂಗಾಧರ ನೆಡ್ಚಿಲು,ಪ್ರಭಾಕರ ನಾಯರ್,ಭಾಸ್ಕರ ನಾಯರ್, ಕುಕ್ಕಪ್ಪ ರೈ ಅರಂಬೂರು, ಮೋಹನ ನಾಯ್ಕ್ ಕೂಟೇಲು ಹಾಗೂ ಸ್ಥಳೀಯರು, ಉಪ ಸಮಿತಿಯ ಸಂಚಾಲಕರು ಮತ್ತು ಸದಸ್ಯರು, ಮಹಿಳಾ ಸಮಿತಿಯ ಸಂಚಾಲಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.