ಕುಂಬರ್ಚೋಡು ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಫೆ 6 ರಂದು ಮಸೀದಿಯಲ್ಲಿ ನಡೆಯಿತು.















ಸ್ವಲಾತ್ ಮಜ್ಲಿಸ್ ನೇತೃತ್ವ ನೀಡಿದ ನೂರುಲ್ ಹುದಾ ಮಾಡನ್ನೂರು ಉಪನ್ಯಾಸಕರಾದ ಸಿದ್ದೀಕ್ ಹುದವಿ ಯವರು ಧಾರ್ಮಿಕ ಉಪನ್ಯಾಸ ನೀಡಿ ‘ನಾವು ಪ್ರತಿನಿತ್ಯ ದಿಕ್ರ್ ಸ್ವಲಾತ್ ಮೂಲಕ ನಮ್ಮ ಹೃದಯವನ್ನು ಶುದ್ದಿಗೊಳಿಸುತ್ತಿರಬೇಕು. ಸ್ವಲಾತ್ ಮಜ್ಲಿಸ್ ಗಳಲ್ಲಿ ಭಾಗವಹಿಸುತ್ತಿರುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಲ್ಲದೆ ಮಾನಸಿಕ ನೆಮ್ಮದಿಯು ಸಿಗುತ್ತದೆ ಎಂದು ಹೇಳಿದರು.
ಸ್ಥಳೀಯ ಮಸೀದಿ ಖತಿಬರಾದ ಅಶ್ರಫ್ ಮುಸ್ಲಿಯಾರ್ ದುವಾ ನೆರೆವೇರಿಸಿದರು.
ಈ ಸಂದರ್ಭದಲ್ಲಿ
ಮಸೀದಿಯ ಮುಅಲ್ಲಿಮ್ ರವೂಫ್ ಅಡೂರು, ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಆಲಿ ಪೆರಾಜೆ
ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಬಿ ಎಮ್,
ಕಾರ್ಯದರ್ಶಿ
ಖಾದರ್ ಅಕ್ಕರೆ,ಆಶ್ರಫ್ ಪ್ರಗತಿ,ಕರೀಂ ಡಿ ಎಂ,ಹನೀಫ್ ಹಾಜಿ ಕೆ ಎಂ,ಆಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಸೀರಣಿ ವಿತರಣೆ ನಡೆಯಿತು.










