
ಸುಳ್ಯ ಮತ್ತು ಕೇರಳದ ಗಡಿ ಪ್ರದೇಶವಾದ, ಇತಿಹಾಸ ಪ್ರಸಿದ್ಧ ಬಂದಡ್ಕದ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಫೆ. ೫ರಿಂದ ಆರಂಭಗೊAಡು ಇಂದು ಆರಟು ಮೆರವಣಿಗೆ ನಡೆದು ಧ್ವಜವಾರೋಹಣ ನಡೆದು ಸಮಾಪ್ತಿಯಾಗಲಿದೆ. ಫೆ. 9ರವರೆಗೆ ವಿವಿಧ ಧಾರ್ಮಿಕ, ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ಜಾತ್ರೋತ್ಸವ ನಡೆದು, ಫೆ. ೯ರಂದು ಶ್ರೀ ದೇವರ ನೃತ್ಯೋತ್ಸವ ನಡೆಯಿತು.
ಫೆ.5ರಂದು ಬೆಳಿಗ್ಗೆ ಗಣಪತಿಹೋಮ, ಉಷಾಪೂಜೆ, ಉಗ್ರಾಣ ತುಂಬಿಸುವುದು, ಹಸಿರು ಕಾಣಿಕೆ ಮೆರವಣಿಗೆ, ಭಾಗವತ ಪಾರಾಯಣ, ಧ್ವಜಾರೋಹಣ, ನೃತ್ಯ ಭಜನೆ, ತಿರುವದಿರ, ನೃತ್ಯ ವೈವಿಧ್ಯ, ಗಾನರ್ಚನೆ, ಪ್ರಸಾದ ವಿತರಣೆ ನಡೆಯಿತು. ಫೆ. 6ರಂದು ಕೂಡಿ ಬೆಳಕು, ಸೌಂದರ್ಯ ಲಹರಿ, ಭಜನೆ, ನೃತ್ಯ ವೈವಿಧ್ಯ ನಡೆಯಿತು.

ಫೆ. 7ರಂದು ನಡು ಬೆಳಕು, ವಿವಿಧ ವೈಧಿಕ ಕಾರ್ಯಕ್ರಮಗಳು, ನೃತ್ಯ ವೈವಿಧ್ಯ, ಯಕ್ಷಗಾನ ನಡೆಯಿತು. ಇದೆ ದಿನ ಸಂಜೆ 6.30ರಿಂದ ಪುತ್ತೂರು ಅಂಬಿಕಾ ಕಾಲೇಜುವಿನ ಅಧ್ಯಾಪಕ, ಅನ್ನುವಂಶಿಕ ಪುರೋಹಿತ ವೇ. ಮೂ.ವಿಷ್ಣು ಪ್ರದೀಪ ನಿಡ್ಡಾಜೆಯವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು.















ಫೆ.8ರಂದು ವಿವಿಧ ವೈಧಿಕ ಕಾರ್ಯಕ್ರಮಗಳು, ಭಜನೆ, ತಾಯಂಭಕ, ಭಜನೆ, ಧಾರ್ಮಿಕ ಉಪನ್ಯಾಸ, ನೃತ್ಯೋತ್ಸವ ನಡೆಯಿತು.
ಇಂದು ನಡೆ ತೆರೆಯುವುದು, ಕೈ ಕೊಟ್ಟಿ ಕಳಿ, ಭಜನೆ, ಆರಟು ಮೆರವಣಿಗೆ, ಧ್ವಜಾವಾರೋಹಣ, ಉತ್ಸವ ಸಮಾಪ್ತಿ ನಡೆಯಲಿದೆ.
ಈ ಸಂದರ್ಭದಲ್ಲಿ ಆಡಳಿತ ಮೋಕ್ತೆಸರರಾದ ಸದಾನಂದ ರೈ, ಅಧ್ಯಕ್ಷ ರಾದ ಶುಭಾಶ್ಚಂದ್ರ ರೈ ತೋಟ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬೊಡ್ಡನಕೊಚ್ಚಿ, ಉಪಾಧ್ಯಕ್ಷರಾದ ಪಿ. ಎಂ. ಭೋಜಪ್ಪ ಗೌಡ ಪಾಲಾರುಮೂಲೆ, ಬಿ. ಸದಾನಂದ ರೈ, ಬಿ. ರವೀಂದ್ರನಾಥ ರೈ, ಖಜಾಂಜಿ ಐ. ಮೋನಪ್ಪ ಗೌಡ, ಜತೆ ಕಾರ್ಯದರ್ಶಿ ಎಂ. ವೆಂಕಪ್ಪ ರೈ, ಎಂ. ಕೆ. ನಿತ್ಯಾನಂದ, ಉತ್ಸವ ಆಚರಣಾ ಸಮಿತಿ ಕನ್ವಿನರ್ ವಿವೇಕಾನಂದ ಪಿ. ಎಂ. ಸೇರಿದಂತೆ ಸಾವಿರಾರು ಭಕ್ತರು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.










