ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಾತುಕತೆ ಇತ್ಯರ್ಥ















ಸುಳ್ಯದಿಂದ ಮೈಸೂರಿಗೆ ವಾಹನದಲ್ಲಿ ದನಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ದ.ಕ. ಸಂಪಾಜೆ ಗ್ರಾಮದ ಗಡಿಕಲ್ಲು ಬಳಿ ತಡೆದು ಪೊಲೀಸರಿಗೆ ತಿಳಿಸಿದ್ದು, ಪೊಲೀಸರ ಮಧ್ಯಸ್ಥಿಕೆಯಲ್ಲಿ ವಾಹನವನ್ನು ಬಿಟ್ಟುಕಳಿಸಿದ ಘಟನೆ ದ.ಕ. ಸಂಪಾಜೆ ಗ್ರಾಮದ ಗಡಿಕಲ್ಲಿನಲ್ಲಿ ಫೆ.15ರಂದು ಸಂಜೆ ವರದಿಯಾಗಿದೆ.
ಸುಳ್ಯದ ಕಡೆಯಿಂದ ದೋಸ್ತ್ ವಾಹನದಲ್ಲಿ ಕರುಗಳನ್ನು ಮೈಸೂರಿಗೆ ಸಾಗಿಸುತ್ತಿದ್ದಾರೆಂಬ ಮಾಹಿತಿ ಪಡೆದ ಸಂಪಾಜೆಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಗಡಿಕಲ್ಲಿನಲ್ಲಿ ವಾಹನವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದರೆನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ತೆರಳಿದ ಮೇಲೆ ವಾಹನದವರು ಮೈಸೂರಿಗೆ ಸಾಕಾಣೆಗಾಗಿ ಮಲೆನಾಡು ಗಿಡ್ಡ ತಳಿಯ ಆರು ಕರುಗಳನ್ನು ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ ಮೇರೆಗೆ , ಮಾತುಕತೆ ನಡೆದು ವಾಹನವನ್ನು ಬಿಟ್ಟು ಕಳುಹಿಸಿದರೆಂದು ತಿಳಿದುಬಂದಿದೆ.










