ಕೊಲ್ಲಮೊಗ್ರು: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ-ಅಪಾರ ಪ್ರಮಾಣದ ಹಾನಿ

0

ಕೊಲ್ಲಮೊಗ್ರು ಗ್ರಾಮದ ಜಯಪ್ರಕಾಶ್ ಕಜ್ಜೋಡಿ ಅವರ ಮನೆ ಬಳಿಯ ರಬ್ಬರ್ ಸ್ಮೂಕ್ ಹೌಸ್ ಗೆ ಫೆ.16 ರ ರಾತ್ತಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ವರದಿಯಾಗಿದೆ.
ಈ ಸಂದರ್ಭ ಸ್ಥಳೀಯರು, ಹರಿಹರ ಭಾಗದ ಕೆಲ ಯುವಕರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರೆನ್ನಲಾಗಿದೆ. ಸ್ಲೋಕ್ ಹೌಸ್ ಸಂಪೂರ್ಣ ಸುಟ್ಟು ಹೋಗಿದ್ದು, ಅಲ್ಪ ಪ್ರಮಾಣದ ರಬ್ಬರ್, ಮಾಡು ಉರಿದು ಹೋಗಿದೆ.

ಸಕಾಲದಲ್ಲಿ ಬೆಂಕಿ ನಂದಿಸಿದ ಕಾರಣ ರಬ್ಬರ್, ಅಡಿಕೆ, ಕಾಳುಮೆಣಸು, ಮರ ಸುಟ್ಟು ಹೋಗುವುದು ತಪ್ಪಿದಂತಾಗಿದೆ. ಅಂದಾಜು 1.5 ರಿಂದ 2 ಲಕ್ಷ ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಬೆಂಕಿ ಹಿಡಿದ ಸಂದರ್ಭ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದ ಕಾರಣ ಬೆಂಕಿ ನಂದಿಸಲು ಹರಸಾಹಸ ಪಡುವಂತಾಯಿತು.