ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಗಾರ

0


ಫೆಬ್ರವರಿ 22ರಂದು ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ರೆ. ಫಾ.ವಿಕ್ಟರ್ ಡಿಸೋಜಾ ರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ವಂದನೀಯ ಗುರುಗಳಾದ ರೆ. ಫಾ. ವಿಕ್ಟರ್ ಡಿಸೋಜಾ, ಕೌನ್ಸಿಲರ್ ಮತ್ತು ಥೆರಫಿಸ್ಟ್ , ಕೌನ್ಸಿಲಿಂಗ್ ಸೆಂಟರ್, ಶಾಂತಿ ಕಿರಣ್, ಬಜ್ಜೊಡಿ, ಮಂಗಳೂರು ಇವರು ಆಗಮಿಸಿ, ಮಕ್ಕಳು ಯಾವ ರೀತಿ ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದು, ಮುಖ್ಯವಾಗಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಹತ್ತು ಸಲಹೆಗಳು, ಜೀವನದಲ್ಲಿ ಶಿಸ್ತಿನ ಅವಶ್ಯಕತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ತಿಳಿಸುತ್ತಾ ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಸಿ. ಮೇರಿಸ್ಟೆಲ್ಲಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ಶ್ರೀಮತಿ ರೀಟಲತಾ ಡಿಸಿಲ್ವರವರು ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಅನಿತಾ ಮಸ್ಕರೇನಸ್ ರವರು ವಂದಿಸಿದರು. ಪ್ರೌಢಶಾಲಾ ಶಿಕ್ಷಕರು ಸಹಕರಿಸಿದರು.