ಬೀದಿ ದೀಪ ,ಕಾಡುಪ್ರಾಣಿಗಳ ಉಪಟಳ,ಶಾಲಾ ಶೌಚಾಲಯ ಬಗ್ಗೆ ಚರ್ಚೆ









ಕೊಡಿಯಾಲ ಗ್ರಾಮ ಪಂಚಾಯತ್ ನ 2024 – 25 ನೇ ಸಾಲಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿಯವರ ಅಧ್ಯಕ್ಷತೆಯಲ್ಲಿ ಮಾ15 ರಂದು ಕೊಡಿಯಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸುಳ್ಯ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ವಿಜಯ್ ರವರು
ನೋಡೆಲ್ ಅಧಿಕಾರಿಯಾಗಿದ್ದರು.
ಗ್ರಾಮ ಪಂಚಾಯತ್ ಪಿಡಿಒ ಪ್ರವೀಣ್ ಸಿ.ವಿಯವರು ಸ್ವಾಗತಿಸಿ, ವಾರ್ಡ್ ಸಭೆಯಲ್ಲಿ ಬಂದ ಮಾಹಿತಿ ನೀಡಿದರು.
ಸಿಬ್ಬಂದಿ ಶ್ರೀಮತಿ ಹರಿಣಿಯವರು ವರದಿ ಮಂಡಿಸಿದರು.
ಬೀದಿ ದೀಪಗಳ ಬಗ್ಗೆ,ಕಾಡುಪ್ರಾಣಿಗಳಿಂದ ಕೃಷಿಕರಿಗೆ ತೊಂದರೆಯಾಗುವ ಬಗ್ಗೆ, ಶಾಲಾ ಶೌಚಾಲಯ ನಿರ್ಮಾಣ,ಕಾಂಟ್ರಾಕ್ಟ್ ನೀಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಿತ್ರಾ ,ಸದಸ್ಯರಾದ ಕರುಣಾಕರ ಆಳ್ವ, ಶ್ರೀಮತಿ ವಿಜಯ ಕುಮಾರಿ,ಶ್ರೀಮತಿ ಯಶವಂತಿ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.










