ಸುಳ್ಯದಲ್ಲಿ ಮಧ್ಯಾಹ್ನ ಬಿರು ಬಿಸಿಲು : ಸಂಜೆ ಭರ್ಜರಿ‌ ಮಳೆ

0

ಸುಳ್ಯದಲ್ಲಿ ಮಧ್ಯಾಹ್ನ ಬಿರು ಬಿಸಿಲಿನ ಪ್ರಭಾವದಿಂದ ಕಂಗೆಟ್ಟಿದ್ದ ಜನರ ದೇಹಕ್ಕೆ ಸಂಜೆಯ ವೇಳೆಗೆ ಭರ್ಜರಿ‌ ಮಳೆಯಾಗಿ ಊರೆಲ್ಲ ತಂಪಾಗಿದೆ.

ಕಳೆದ ಕೆಲ ದಿನಗಳಿಂದ ಸುಳ್ಯದಲ್ಲಿ ಬಿಸಿಲಿನ ತಾಪದಿಂದ ಜನರು ಕಂಗೆಟ್ಟು ಹೋಗಿದ್ದರು. ಕೆಲವು ದಿನ ಬಿಸಿಲು‌ ಎಷ್ಟಿತ್ತೆಂದರೆ ರಾಜ್ಯದಲ್ಲಿ ಸುಳ್ಯದ ತಾಪಮಾನ ನಂಬರ್ ವನ್ ಗೆ ಏರಿಕೆಯಾಗಿತ್ತು.

ಇಂದು ಕೂಡಾ ಮಧ್ಯಾಹ್ನ ಬಿರು ಬಿಸಿಲು ಇತ್ತು. ದೇಹವೆಲ್ಲ ಬಿಸಿಯನ್ನು ಬದ ಅನುಭವ ಆದಂತಿತ್ತು.‌ ಆದರೆ ಸಂಜೆಯ 5 ರ ಸುಮಾರಿಗೆ ಮಳೆ ಸುರಿಯಲಾರಂಭಿಸಿ ಭರ್ಜರಿ ಗಾಳಿ‌ಮಳೆ ಸುರಿದು ಊರೆಲ್ಲ ತಂಪಾಯಿತು.