ಕೊಡಗು ಗೌಡ ನಿವೃತ್ತ ನೌಕರರ ಸಂಘ (ರಿ.), ಮಡಿಕೇರಿ ಇದರ ವತಿಯಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶವನ್ನು ಏ.11 ರಂದು ಶುಕ್ರವಾರ ಬೆಳಿಗ್ಗೆ 9.30 ಗಂಟೆಗೆ ಕೊಡಗು ಗೌಡ ಸಮಾಜ ಸಭಾಂಗಣ ಗುಡ್ಡೆಮನೆ ಅಪ್ಪಯ್ಯ ರಸ್ತೆ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ವಧು-ವರರ ನೋಂದಣಿ ಪ್ರಕ್ರಿಯೆಯನ್ನು ಸದರಿ ದಿನದಂದು ಬೆಳಿಗ್ಗೆ 9.೦೦ಗಂಟೆಗೆ ಪ್ರಾರಂಭಿಸಲಾಗುವುದು ಹಾಗೂ ಆನ್‌ಲೈನ್ ಮುಖಾಂತರವೂ ವಧು-ವರರ ನೋಂದವಣಿಯನ್ನು ಮಾಡಬಹುದಾಗಿದೆ.















ಆನ್‌ಲೈನ್ ಮೂಲಕ ನೋಂದಾಯಿಸುವವರು ಈ ಕೆಳಗಿನ ಇ-ಮೇಲ್‌ನಲ್ಲಿ ನೋಂದಾಯಿಸಬಹುದಾಗಿದೆ.
[email protected]
Kumar.kuyyamudi@gmail
.com
ನಿಯಮಗಳು:
ವಧು-ವರರು ಕಡ್ಡಾಯವಾಗಿ ಭಾಗವಹಿಸತಕ್ಕದ್ದು, ನೋಂದಣಿ ಶುಲ್ಲ ರೂ.5೦೦ ಆಗಿರುತ್ತದೆ, ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷ ವಯೋಮಿತಿ ಇರಬೇಕು, ವಧುವರರು ತಮ್ಮ ಪೋಸ್ಟ್ ಕಾರ್ಡ್ ಅಳತೆಯ ಪೋಟೋ, ಜಾತಕ, ಆಧಾರ್ ಕಾರ್ಡ್, ವಿದ್ಯಾರ್ಹತೆ, ಉದ್ಯೋಗ ಮತ್ತಿತರ ಮಾಹಿಗಳನ್ನು ನೀಡಬೇಕು. ವಿಶೇಷ ಚೇತನರು, ವಿಧುರ ಮತ್ತು ವಿಧವೆಯರು, ಮರು ವಿವಾಹ ಬಯಸುವವರು, ವಿಚ್ಛೇದಿತ ಗಂಡು ಅಥವಾ ಹೆಣ್ಣು ಭಾಗವಹಿಸಬಹುದು.
ವಿದೇಶಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ನೆಲೆಸಿರುವ, ಜನಾಂಗದ ಬಂಧುಗಳು ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗೆ 9448884673, 9663254829 ಸಂಪರ್ಕಿಸಿ.










