ಕೊಲ್ಲಮೊಗ್ರು ಗ್ರಾ. ಪಂ. ನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆ

0

ಫಲಾನುಭವಿಗಳಿಗೆ ಪಾತ್ರೆ ವಿತರಣೆ

ಕೊಲ್ಲಮೊಗ್ರು ಗ್ರಾಮ ಪಂಚಾಯತು ನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ೧೩೪ ನೇ ಜನ್ಮದಿನಾಚರಣೆ ಯನ್ನು ಶ್ರೀ ಮತಿ ಮೋಹಿನಿ ಕಟ್ಟ ಇವರ ಅಧ್ಯಕ್ಷತೆಯಲ್ಲಿ ಏ.೧೪ ರಂದು ನಡೆಯಿತು.

ಶ್ರೀಮತಿ ಬಾಗಿ ಕೊಲ್ಲಮೊಗ್ರು ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಕೊಲ್ಲಮೊಗ್ರು ಗ್ರಾ. ಪಂ. ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಲ್ಲಾ ಕುಟುಂಬಗಳಿಗೆ ಪಾತ್ರೆಯನ್ನು ಪಂಚಾಯತ್ ವತಿಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಒ ಚೆನ್ನಪ್ಪ ನಾಯ್ಕ ಬಿ ಸ್ವಾಗತಿಸಿದರು, ಗ್ರಾ.ಪಂ ಅಉಪಾಧ್ಯಕ್ಷರಾದ ಶ್ರೀ ಮಾಧವ ಚಾಂತಾಳ, ಸದಸ್ಯರುಗಳಾದ ಶ ಅಶ್ವತ್ ಯಲದಾಳು, ಪುಷ್ಪರಾಜ ಪಡ್ಪು, ಶ್ರೀ ಮತಿ ಶಿವಮ್ಮ , ಬಾಲಸುಬ್ರಹ್ಮಣ್ಯ ಭಟ್ ಕೊಳಗೆ ಉಪಸ್ಥಿತರಿದ್ದರು. ಪಿಡಿಒ ಚೆನ್ನಪ್ಪ ನಾಯ್ಕ ಸ್ವಾಗತಿಸಿದರು. ಗ್ರಾ.ಪಂ ಸಿಬ್ಬಂದಿ ವರ್ಗ ಹಾಜರಿದ್ದರು. ಗ್ರಾಮ.ಪಂ ಕಾರ್ಯದರ್ಶಿ ಮೊಹನ್ ಕಡ್ತಲ್ಕಜೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಮಾಡಿದರು.