ಮೋನಪ್ಪ ಗೌಡ ಮರೆಂಗಳ ನಿಧನ

0

ಮುರುಳ್ಯ ಗ್ರಾಮದ ಮರೆಂಗಳ ಕುಟುಂಬದ ಹಿರಿಯರಾದ ಮೋನಪ್ಪ ಗೌಡ ಮರೆಂಗಳರವರು ಎ.೧೬ ರಂದು ನಿಧನರಾದರು.
ಅವರಿಗೆ ೮೧ ವರ್ಷ ಪ್ರಾಯವಾಗಿತ್ತು.

ಇವರು ಪ್ರಗತಿಪರ ಕೃಷಿಕರಾಗಿದ್ದು ಭತ್ತ,ಹಲವು ವಿಧದ ತರಕಾರಿ , ವಿಶೇಷವಾಗಿ ವೀಳ್ಯದೆಲೆ ಬೆಳೆಯುವುದರಲ್ಲಿ ಆಸಕ್ತಿ ಹೊಂದಿದ್ದರು.
೧೯೮೦-೯೦ ರ ದಶಕದಲ್ಲಿ ತನ್ನ ಸಹೋದರರ ಜತೆ ಕಂಬಳದ ಕೋಣಗಳನ್ನು ಸಾಕಿ ಹಲವು ಕಂಬಳ ಕೂಟಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದರು.

ಇವರು ಪತ್ನಿ ಶ್ರೀಮತಿ ದೇವಕಿ , ಪುತ್ರ ಉಮೇಶ ಮರೆಂಗಳ, ಸೊಸೆ ನಳಿನಿ, ಇನ್ನೋರ್ವ ಪುತ್ರ ಸುದರ್ಶನ ಮರೆಂಗಳ ಹಾಗೂ ಸೊಸೆ ಸುಳ್ಯ ತಾಲೂಕು ಕಛೇರಿ ಸಿಬ್ಬಂದಿ ಗೀತಾ ಸುದರ್ಶನ್, ಪುತ್ರಿಯರಾದ ಶ್ರೀಮತಿ ಉಷಾ ಆನಂದ ಗೌಡ ಬನಾರಿ ದೋಳ್ಪಾಡಿ, ರಾಮಕುಂಜ ಶಾಲಾ ಶಿಕ್ಷಕಿ ಶ್ರೀಮತಿ ಜಯಶ್ರೀ ಸತೀಶ್ ಪೆರಂಗಾಜೆ , ಹಾಗೂ ಮೊಮ್ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.