ಪುತ್ತೂರು ಜಾತ್ರಾ ಗದ್ದೆಯಲ್ಲಿರುವ ಮಳಿಗೆಗಳ ಮಾಹಿತಿ ಸುದ್ದಿ ಮಾಹಿತಿ ಕೇಂದ್ರದಲ್ಲಿ ಲಭ್ಯ
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಬ್ರಹ್ಮರಥೋತ್ಸವ ಮತ್ತು ಪುತ್ತೂರು ಬೆಡಿ ಎಂದೇ ಕರೆಯಲ್ಪಡುವ ಸುಡುಮದ್ದು ಪ್ರದರ್ಶನ ಏಪ್ರಿಲ್ ೧೭ ರಂದು ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ರಥೋತ್ಸವ ಹಾಗೂ ಸುಡುಮದ್ದು ಪ್ರದರ್ಶನವನ್ನು ಕಣ್ತುಂಬಿಕೊಂಡಿದ್ದಲ್ಲದೆ, ಸಂತೆ ಸುತ್ತಾಟವನ್ನೂ ನಡೆಸಿದ್ದಾರೆ.















ಜಾತ್ರಾ ಗದ್ದೆಯಲ್ಲಿರುವ ವಿವಿಧ ತಿಂಡಿ ತಿನಿಸುಗಳ ಸ್ಟಾಲ್‌ಗಳು, ಗೃಹೋಪಯೋಗಿ ವಸ್ತುಗಳು, ದೈನಂದಿನ ಬಳಕೆ ವಸ್ತುಗಳ ಸ್ಟಾಲ್‌ಗಳು, ಮಕ್ಕಳ ಆಟಿಕೆ ಸಾಮಾಗ್ರಿಗಳು ಸೇರಿದಂತೆ ಎಲ್ಲಾ ವ್ಯಾಪಾರ ಮಳಿಗೆಗಳ ಮಾಹಿತಿ ಸುದ್ದಿ ಮಾಹಿತಿ ಕೇಂದ್ರದಲ್ಲಿ ಲಭ್ಯವಾಗಲಿದೆ. ಆಸಕ್ತರು ಜಾತ್ರಾ ಗದ್ದೆಯಲ್ಲಿರುವ ಸುದ್ದಿ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಬಹುದು.










