ಪಲ್ಲಕ್ಕಿಯಲ್ಲಿ ರಾಯರ ಭಕ್ತಿ, ಸಂಭ್ರಮದ ಪಟ್ಟಣ ಸವಾರಿ

ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಎ.21 ರಂದುಆರಂಭಗೊಂಡಿದ್ದು ಮಠದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಹರಿ ಎಳಚಿತ್ತಾಯ ರವರ ಮಾರ್ಗದರ್ಶನದಲ್ಲಿ ಅರ್ಚಕ ರವಿರಾಜ ನಾವಡ ರವರ ನೇತೃತ್ವದಲ್ಲಿ ಪೂರ್ವಾಹ್ನ ಮಹಾಗಣಪತಿ ಹೋಮವು ನಡೆಯಿತು. ಬಳಿಕ ಸಂಜೆ ಪಲ್ಲಕ್ಕಿಯಲ್ಲಿ ರಾಯರ ಪಟ್ಟಣ ಸವಾರಿಯು ಮಠದಿಂದ ಹೊರಟು ಜೂನಿಯರ್ ಕಾಲೇಜ್ ರಸ್ತೆಯ ಮೂಲಕ ಸಾಗಿ ಬಂತು. ಯುವಜನ ಸಂಯುಕ್ತ ಮಂಡಳಿಯ ಮುಂಭಾಗದಲ್ಲಿ, ಶ್ರೀ ಹರಿ ಕಾಂಪ್ಲೆಕ್ಸ್ ಎದುರು, ಖಾಸಗಿ ಬಸ್ ನಿಲ್ದಾಣದಲ್ಲಿ, ಚೆನ್ನಕೇಶವ ದೇವಸ್ಥಾನದ ಎದುರಿನಲ್ಲಿ ಪಲ್ಲಕ್ಕಿಯಲ್ಲಿ ರಾಯರ ನರ್ತನ ಸೇವೆಯು ನಡೆಯಿತು.















ಈ ಸಂದರ್ಭದಲ್ಲಿ ಅರಂತೋಡು ಸ್ವರಲಯ ಸಿಂಗಾರಿ ಮೇಳದ ಚೆಂಡೆ ವಾದನ, ಸ್ಯಾಕ್ಸ್ ಫೋನ್ ವಾದನ, ರಾಘವೇಂದ್ರ ಮಕ್ಕಳ ಭಜನಾ ತಂಡದಿಂದ ಭಜನೆಯು ನಡೆಯಿತು. ಭಕ್ತ ಸಮೂಹದೊಂದಿಗೆ ರಾಯರು ಪಲ್ಲಕಿಯಲ್ಲಿ ವಿರಾಜನಮಾನರಾಗಿ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಬಂದರು. ರಸ್ತೆಯ ಇಕ್ಕೆಲಗಳಲ್ಲಿ ರಾಯರ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ರಾಯರಿಗೆ ಹೂವು ಹಣ್ಣು ಸಮರ್ಪಿಸಿ ಮಂಗಳಾರತಿ ಬೆಳಗಿದರು.
ಉದ್ಯಮಿಕೃಷ್ಣ ಕಾಮತ್ ಅರಂಬೂರು, ರಮೇಶ್ ಸೋಮಯಾಗಿ, ಶೈಲೇಶ್ ಸರಳಾಯ ರವರು ಮೆರವಣಿಗೆಯಲ್ಲಿ ಸಾಗಿದ ಭಕ್ತರಿಗೆ ಪಾನೀಯ ಮತ್ತು ಬಾಳೆ ಹಣ್ಣು, ತಿಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.
ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ, ಸಂಚಾಲಕ ಪ್ರಕಾಶ್ ಮೂಡಿತ್ತಾಯ, ಕಾರ್ಯದರ್ಶಿ ರಾಮ್‌ಕುಮಾರ್ ಹೆಬ್ಬಾರ್, ಖಜಾಂಜಿ ಮುರಳೀಕೃಷ್ಣ ಡಿ.ಆರ್, ಟ್ರಸ್ಟಿ ರಮೇಶ್ ಕುಮಾರ್, ಶಿವಳ್ಳಿ ಸಂಪನ್ನದ ಗೌರವಾಧ್ಯಕ್ಷ ಗಂಗಾಧರ ಮಟ್ಟಿ ಜತೆಯಲ್ಲಿದ್ದರು. ಮಠದ ಟ್ರಸ್ಟಿನ ಸದಸ್ಯರು,ಮಹಿಳೆಯರು, ಮಕ್ಕಳು ಸ್ವಯಂ ಸೇವಕ ರಾಗಿ ಸಹಕರಿಸಿದರು










