ಕೊಲ್ಲಮೊಗ್ರು ಹರಿಹರ ಸೊಸೈಟಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆದಿದ್ದು
ಸಹಕಾರ ಭಾರತೀಯ ಸದ್ಯಸ್ಯರಾಗಿ ಸ್ಪರ್ಧಿಸಿ ಆಯ್ಕಯಾಗಿದ್ದ ಡಾl ಸೋಮಶೇಖರ ಕಟ್ಟೆಮನೆ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಗಣೇಶ್ ಭಟ್ ಇಡ್ಯಡ್ಕ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.















ಅಧ್ಯಕ್ಷತೆಗೆ ಸೋಮಶೇಖರ ಅವರನ್ನು ನಿರ್ದೇಶಕ ಡ್ಯಾನಿ ಯಲದಾಳು ಸೂಚಿಸಿದರು. ಉಪಾಧ್ಯಕ್ಷತೆ ಗಣೇಶ್ ಭಟ್ ರನ್ನು ಕಮಲಾಕ್ಷ ಮುಳ್ಳುಭಾಗಿಲು ಸೂಚಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕೆ.ಸಿ, ರೇಗನ್ ಶೆಟ್ಯಡ್ಕ, ಗೋಪಾಲಕೃಷ್ಣ, ಬೊಳಿಯ ಅಜಿಲ, ಮಹಾಲಿಂಗ ನಾಯ್ಕ, ವೇದಾವತಿ ಮುಳ್ಳುಬಾಗಿಲು, ಮೇನಕ ಕೊಪ್ಪಡ್ಕ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಕೃಷ್ಣಯ್ಯ ಮೂಲೆತೋಟ, ವಿನಯ ಮುಳುಗಾಡು, ಚಂದ್ರಹಾಸ ಶಿವಾಲ ಈ ಭಾಗದ ಬಿಜೆಪಿ ಜನ ಪ್ರತಿನಿಧಿಗಳು, ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಚುನಾವಣಾ ಅಧಿಕಾರಿ ಶಿವಲಿಂಗಯ್ಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಮನೋಜ್ ಕುಮಾರ್ ಮಾಣಿಬೈಲು ಸಹಕರಿಸಿದರು.










