ಜಮ್ಮು ಕಾಶ್ಮೀರದ ಪಹಲ್ ಗಾಂವ ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಸುಳ್ಯದಲ್ಲಿ ವರ್ತಕರಿಂದ ಸ್ವಯಂ ಪ್ರೇರಿತ ಬಂದ್ : ಪ್ರತಿಭಟನೆ

0

ಭಯೋತ್ಪಾದಕರಿಗೆ ತಕ್ಕ ಉತ್ತರ : ಪ್ರತಿಭಟನಾಕಾರರ ಆಕ್ರೋಶ

ಜಮ್ಮು ಕಾಶ್ಮೀರದ ಪಹಲ್ ಗಾಂವ ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಸುಳ್ಯ ನಗರದಲ್ಲಿ ಬಹುತೇಕ ವರ್ತಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು.

ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೆ ಸ್ವಯಂ ಪ್ರೇರಿತ ಬಂದ್ ನಡೆಸಿದರು. ನೂರಾರು ಮಂದಿ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ, “ಜಮ್ಮುವಿನ ಘಟನೆ ಬೇಸರ ತರಿಸಿದೆ. ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ಎಲ್ಲರೂ ಒಗ್ಗಟ್ಟಾಗಬೇಕಿದೆ. ಉಗ್ರರಿಗೆ ತಕ್ಕ ಶಿಕ್ಷೆ ಆಗುತ್ತದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವೆಲ್ಲರೂ ಇನ್ನಷ್ಟು ಬಲಕೊಡೋಣ. ಭಯೋತ್ಪಾದಕರ ಧಾಳಿಗೆ ಧೈರ್ಯವಾಗಿ ಎದೆಕೊಟ್ಟು ಮರಣವಪ್ಪಿದವರಿಗೆ ನಮ್ಮ ಸಂತಾಪವಿದೆ. ಭಯೋತ್ಪಾದಕ ಕೃತ್ಯ ಕೊನೆಗಾನಿಸಲು ಸೈನಿಕರಿಗೂ ನಾವು ಶಕ್ತಿ ನೀಡೋಣ ಎಂದು ಹೇಳಿದರು.

ವರ್ತಕರಾದ ಜಿ.ಜಿ. ನಾಯಕ್ ಮಾತನಾಡಿ “ದೇಶದ ಅಭಿವೃದ್ಧಿ ಬಗ್ಗೆ ತುಡಿತ ಇದ್ದವರಿಗೆ ನಿನ್ನೆಯ ಘಟನೆಯಿಂದ ನಿಜವಾಗಿ ನೋವಾಗಿದೆ. ಹಿಂದೂ ಧರ್ಮದ ಮೇಲೆ ಆಗಿರುವ ಘಟನೆಯನ್ನು ವಿರೋಧಿಸಿ ಇಲ್ಲಿ ನಾವೆಲ್ಲರೂ ಸೇರಿದ್ದೇವೆ. ಕಾಶ್ಮೀರದ ಘಟನೆ ನಮ್ಮ ಮನಸ್ಸನ್ನು ಕಲಕಿದೆ. ಇದಕ್ಕೆ ತಕ್ಕ ಉತ್ತರ ಕೇಂದ್ರ ಸರಕಾರ ನೀಡಲಿದೆ” ಎಂದು ಹೇಳಿದರು.

ಉದ್ಯಮಿ ರಾಜೇಶ್ ಶೆಟ್ಟಿ ಮೇನಾಲ ಮಾತನಾಡಿ “ನಿನ್ನೆಯ ಘಟನೆಯ ಕ್ರೌರ್ಯವನ್ನು ನಾವು ಅವಲೋಕನ ಮಾಡಬೇಕಿದೆ. ಆ ಘಟನೆಯಿಂದ ಎಲ್ಲ ಮತಗಳು ಶಾಂತಿಯನ್ನು ಬಯಸೋದಿಲ್ಲ ಎಂದು ಗೊತ್ತಾಗುತ್ತದೆ. ವಕ್ಫ್ ಕಾನೂನು ತಿದ್ದುಪಡಿಯ ಒಂದೇ ಕಾರಣಕ್ಕೆ ಹಿಂದೂಗಳ ಮೇಲೆ ಭಯೋತ್ಪಾದಕ ಕೃತ್ಯ ಅಲ್ಲಲ್ಲಿ ನಡೆಯೋದನ್ನು ಕಾಣುತ್ತಿದ್ದೇವೆ. ಧರ್ಮ ಒಡೆಯುವ ಕೆಲಸ ನಿರಂತರವಾಗಿ ಕೆಲವರು ಮಾಡುತ್ತಾರೆ. ಇದಕ್ಕೆ ನಾವು ಆಸ್ಪದ ನೀಡಬಾರದು. ದೇಶದಲ್ಲಿ ಅಶಾಂತಿ ಯನ್ನು ತರುವವರಿಗೆ ನಮ್ಮ ದೈವ ದೇವರು ಉತ್ತರ ಕೊಡುತ್ತಾರೆ” ಎಂದು ಹೇಳಿದರು.

ನಗರ ಪಂಚಾಯತ್ ಮಾಜಿ ಆದ್ಯಕ್ಷ ಹಾಲಿ ಸದಸ್ಯ ವಿನಯ ಕುಮಾರ್ ಕಂದಡ್ಕ ಮಾತನಾಡಿ ಹಿಂದೂ ಸಮಾಜ‌ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಇದ್ದು ಸತ್ತಂತೆ ಆಗುತ್ತದೆ. ಮೊದಲು ನಾವು ಎಚ್ಚರವಾಗೋಣ. ದೇಶದಲ್ಲಿ ಸಾಮೂಹಿಕ ಹತ್ಯಾಕಾಂಡ ಇಂದು ನಿನ್ನೆಯದಲ್ಲ ಎಂದ ಅವರು ಸಂಸದರಾಗಿದ್ದ ಅನಂತ್ ಕುಮಾರ್ ಹೆಗ್ಡೆಯವರು ಹಿಂದೆ ಹೇಳಿದ ಮಾತು ನಿಜವಾಗಿಯೂ ಸತ್ಯ ಎಂದು ಹೇಳಿದರು.

ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ ಪ್ರವಾಸಿಗರ ಭಯೋತ್ಪಾದಕ ಕೃತ್ಯವನ್ನು ಖಂಡಿಸುತ್ತೇವೆ. ದೇಶ ದ್ರೋಹದ ಘಟನೆ ನಡೆಯಬಾರದು. ನಾವು ಜಾಗೃತರಾಗೋಣ” ಎಂದು ಹೇಳಿದರು.

ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ, ಡಾ.ಮನೋಜ್ ಅಡ್ಡಂತಡ್ಕ,ಹರೀಶ್ ಕಂಜಿಪಿಲಿ, ಸುಧಾಕರ ಕುರುಂಜಿಭಾಗ್, ಶಿವರಾಮ ಕೇರ್ಪಳ, ಅಶೋಕ್ ಪ್ರಭು, ಪೂಜಿತಾ ಕೆ.ಯು. , ಸುಶೀಲ ಕಲ್ಲುಮುಟ್ಲು, ಚಂದ್ರಶೇಖರ ಅಡ್ಪಂಗಾಯ, ಹೇಮಂತ್ ಮಠ, ಪ್ರಬೋದ್ ಶೆಟ್ಟಿ ಮೇನಾಲ, ಸುಧಾಕರ ಕಾಮತ್ ಅಡ್ಕಾರು, ಕೇಶವ ನಾಯಕ್,
ದಯಾನಂದ ಕೇರ್ಪಳ, ಕರುಣಾಕರ ಹಾಸ್ಪಾರೆ, ದಾಮೋದರ ಮಂಚಿ, ಮಧು ಕೊಡಿಯಾಲಬೈಲು, ಜಗದೀಶ್ ಸರಳಿಕುಂಜ,ಮಧುಸೂದನ್ ಜಯನಗರ, ಹೇಮಂತ್ ಕಂದಡ್ಕ, ದಿನೇಶ್ ಶಾಂತಿಮಜಲು, ದೇವರಾಜ್ ಕುದ್ಪಾಜೆ, ವೆಂಕಟ್ರಮಣ ಮುಳ್ಯ, ದೇವರಾಜ ಕುದ್ಪಾಜೆ ನಾರಾಯಣ ಶಾಂತಿನಗರ, ವಸಂತ ಕಿರಿಭಾಗ, ಗಿರೀಶ್ ಡಿ.ಎಸ್., ಚಿದಾನಂದ ಕುದ್ಪಾಜೆ, ಸುಳ್ಯ ನಗರದ ವರ್ತಕರು, ರಿಕ್ಷಾ ಚಾಲಕರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.