⬆️ ಪಂಜಿನ ಮೆರವಣಿಗೆಯಲ್ಲಿ ದೇಶ ಭಕ್ತರು
⬆️ ಒಂದು ತಾಸು ಅಂಗಡಿ ಮುಂಗಟ್ಟುಗಳು ಬಂದ್

ಭಯೋತ್ಪಾದಕರು ಜಮ್ಮು ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದ ಅಮಾಯಕ ಹಿಂದು ಬಂಧುಗಳನ್ನು ತನ್ನ ಹೆಂಡತಿ ಮಕ್ಕಳ ಕಣ್ಣೆದುರೇ ಗುಂಡಿಕ್ಕಿ ಕೊಲ್ಲುವ ಹೀನ ಕೃತ್ಯವೆಸಗಿ ವಿಕೃತಿ ಮೆರೆದಿದ್ದಾರೆ. ಈ ದುಷ್ಕೃತ್ಯವನ್ನು ಖಂಡಿಸಿ ಎ.26 ರಂದು ಸಂಜೆ ಪಂಜ ಪೇಟೆಯಲ್ಲಿ ಬೃಹತ್ ಪ್ರತಿಭಟನೆ-ಪಂಜಿನ ಮೆರವಣಿಗೆ ಮತ್ತು ಬಲಿಯಾದ ಬಂಧುಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು.















ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಮೋಹನದಾಸ ಮಾತನಾಡಿ “ಮುಂದಿನ ಪೀಳಿಗೆಗಾಗಿ ಭವಿಷ್ಯಕ್ಕಾಗಿ ನಾವೆಲ್ಲ ದೇಶದ ರಕ್ಷಣೆಗಾಗಿ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ. ನಾವು ಈ ಸಮಾಜದ ಆಧಾರ ಸ್ತಂಭವಾಗಬೇಕು.ಮೊನ್ನೆ ಉಗ್ರರಿಂದ ನಡೆದ 27 ಜನರ ನರಮೇದಕ್ಕೆ ನಮ್ಮ ಯೋಧರು ಉತ್ತರ ನೀಡುತ್ತಾರೆ. ಸರಕಾರ ಪಾಪಿ ಪಾಕಿಸ್ಥಾನಕ್ಕೆ ಅನೇಕ ನಿರ್ಬಂಧಗಳನ್ನು ಹೇರಿದೆ. ನಾವೆಲ್ಲರೂ ಒಂದಾಗಿ ಸಹೋದರರಾಗಿ ಬಾಳುವ. ಈ ದೇಶದ ನೀರು ಗಾಳಿ ಆಹಾರ ಸೇವಿಸಿ ಇಲ್ಲಿರುವ ಒಂದಷ್ಟು ಜನ ಉಗ್ರವಾದ ರೀತಿ ಯೋಚನೆ ಮಾಡಿದರೆ ಇಡೀ ಹಿಂದೂ ಸಮಾಜ ತಿರುಗಿ ಬೀಳುವ ಅನಿವಾರ್ಯ ಮುಂದೆಯೂ ಆಗ ಬಹುದು.” ಎಂದು ಅವರು ಹೇಳಿದರು.
ಪ್ರಕಾಶ್ ಜಾಕೆ ಪ್ರಾಸ್ತಾವಿಕವಾಗಿ ಮಾತನಾಡಿ “ಪಾಪಿ ಪಾಕಿಸ್ಥಾನದಲ್ಲಿರುವ ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲ ನೀಡುವವರು ನಾಶ ಆಗ ಬೇಕು . ನಮ್ಮ ದೇಶದಲ್ಲೂ ಇರುವ ಭಯೋತ್ಪಾದಕರು, ಬೆಂಬಲಿಸುವವರು ನಾಶ ಆಗ ಬೇಕು ಎಂಬ ಉದ್ದೇಶದ ಕಾರ್ಯಕ್ರಮ ಇದು” ಎಂದು ಹೇಳಿದರು.

ಹಿರಿಯ ವೈದ್ಯರಾದ ಡಾ.ರಾಮಯ್ಯ ಭಟ್ ಪಂಜ, ನಿವೃತ್ತ ಯೋಧ ಜತ್ತಪ್ಪ ಗೌಡ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಜಾಕೆ ಸ್ವಾಗತಿಸಿದರು . ನಿತ್ಯಾನಂದ ಮೇಲ್ಮನೆ ವಂದಿಸಿದರು. ಪಂಜಿನ ಮೆರವಣಿಗೆ ಪಂಜ ಪೇಟೆಯಿಂದ ಸಿ ಎ ಬ್ಯಾಂಕ್ ಬಳಿ ಸಾಗಿ ಬಂದು ಶ್ರದ್ಧಾಂಜಲಿ ಮತ್ತು ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ವರ್ತಕರು ಸುಮಾರು 1 ತಾಸು ಅಂಗಡಿ ಮುಂಗಟ್ಟುಗಳು ಬಂದ್ ನಡೆಸಿ ಪ್ರತಿಭಟನೆಗೆ ಬೆಂಬಲಿಸಿದರು.










