
ದಾಸ ಸಾಹಿತ್ಯ ಪ್ರಾಜೆಕ್ಟ್, ತಿರುಮಲ ತಿರುಪತಿ ಟ್ರಸ್ಟ್ ರಿ. ವತಿಯಿಂದ ನೋಂದಾಯಿಸಲ್ಪಟ್ಟ ಕನಕಮಜಲಿನ ಕನಕದಾಸ ಮಕ್ಕಳ ಭಜನಾ ಮಂಡಳಿಯ ಸದಸ್ಯರು ಎ. 26 ರಂದು ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ ಗೆ ಭೇಟಿ ನೀಡಿದರು.

ಆರಂಭದಲ್ಲಿ ಕಡಮ್ಮಾಜೆ ಫಾರ್ಮ್ ನಲ್ಲಿ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮೀನು ಸಾಕಾಣಿಕೆ, ವಿವಿಧ ತರಕಾರಿ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮಕ್ಕಳು ಬಳಿಕ ಮನೆಯ ಹೊರಾಂಗಣದಲ್ಲಿ ಕುಣಿತ ಭಜನಾ ಸೇವೆ ನಡೆಸಿಕೊಟ್ಟರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಡಮ್ಮಾಜೆ ಫಾರ್ಮು ನ ಶ್ರೀಮತಿ ಕುಸುಮ ದಿನಕರ ಮೊಗ್ರು, ದೇವಿಪ್ರಸಾದ್ ಮೊಗ್ರು, ಜಯಪ್ರಸಾದ್ ಮೊಗ್ರು, ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ, ಕನಕದಾಸ ಮಕ್ಕಳ ಭಜನಾ ಮಂಡಳಿಯ ಅಧ್ಯಕ್ಷೆ ಕು. ಆಕಾಂಕ್ಷ ಕಜೆಗದ್ದೆ, ಜಾಲ್ಸುರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು.
















ಈ ಸಂದರ್ಭದಲ್ಲಿ ಭಜನಾ ಮಂಡಳಿಯ ವತಿಯಿಂದ ಶ್ರೀಮತಿ ಕುಸುಮ ದಿನಕರ ಮತ್ತು ಮನೆಯವರನ್ನು ಗೌರವಿಸಲಾಯಿತು.
ಕಡಮ್ಮಾಜೆ ಫಾರ್ಮ್ ವತಿಯಿಂದ ಭಜನಾ ಮಂಡಳಿ ಅಧ್ಯಕ್ಷೆ ಕು. ಆಕಾಂಕ್ಷ ಕಜೆಗದ್ದೆಯವರನ್ನು ಗೌರವಿಸಲಾಯಿತು.

ವಿದ್ಯಾರ್ಥಿಗಳಾದ ಮಾ. ಮನೀಶ್ ಕಾಳಪ್ಪಜ್ಜನಮನೆ ಮತ್ತು ಕು. ಸಮೀಕ್ಷ ಕುತ್ಯಾಳ ಅನಿಸಿಕೆ ವ್ಯಕ್ತಪಡಿಸಿದರು.

ಭಜನಾ ಮಂಡಳಿಯ ಸಂಚಾಲಕಿ ಶ್ರೀಮತಿ ಹೇಮಲತಾ ಗಣೇಶ್ ಕಜೆಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪೋಷಕ, ವಿವೇಕಾನಂದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಯಪ್ರಸಾದ್ ಕಾರಿಂಜ ವಂದಿಸಿದರು. ಭಜನಾ ಮಂಡಳಿಯ ವಿದ್ಯಾರ್ಥಿಗಳ ಪೋಷಕರು ಸಹಕರಿಸಿದರು.











