














ಗಣಿತವೆಂದರೆ ಅದು ಕಬ್ಬಿಣದ ಕಡಲೆಯಲ್ಲ, ಅದಕ್ಕೆ ಯಾರೂ ಅಂಜಬೇಕಾಗಿಲ್ಲ. ಗಣಿತವನ್ನು ಸುಲಭವಾಗಿ ಕೈವಶ ಮಾಡಿಕೊಳ್ಳಬಹುದು. ಅಂತಹ ಸುಲಭ ಸೂತ್ರಗಳನ್ನು ಕಂಡುಹಿಡಿದು ವಿಶ್ವದ ವಿವಿಧೆಡೆಗಳಲ್ಲಿ ಎಂಟೂನೂರಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿರುವ ವಿ.ಎಸ್.ಎಸ್. ಶಾಸ್ತ್ರಿಯವರು ಸುಳ್ಯದ ಸ್ನೇಹ ಶಾಲೆಯ ವಿದ್ಯಾರ್ಥಿಗಳಿಗೆ ಜೂನ್ 19 ಮತ್ತು 20 ರಂದು ಗಣಿತ ಕಾರ್ಯಾಗಾರವನ್ನು ನಡೆಸಲಿದ್ದಾರೆ. ಜೂನ್ 21 ರಂದು ಶಿಕ್ಷಕರಿಗೆ ಕಾರ್ಯಾಗಾರವಿರುತ್ತದೆ. ಆಸಕ್ತ ಶಿಕ್ಷಕರು ಸಂಪರ್ಕಿಸಬಹುದು ಎಂಬುದಾಗಿ ಸ್ನೇಹ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ತಿಳಿಸಿರುತ್ತಾರೆ.










