
ಮುರುಳ್ಯ ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ.18 ಮತ್ತು 19ರಂದು ಬ್ರಹ್ಮ ಶ್ರೀ ವೇದ ಮೂರ್ತಿ ನೀಲೇಶ್ವರ ಕೆ. ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು.
ಮೇ .18ರಂದು ಸಂಜೆ ತಂತ್ರಿಗಳ ಆಗಮನವಾಗಿ ಸಾಮೂಹಿಕ ಪ್ರಾರ್ಥನೆ, ಸಾರ್ವಜನಿಕ ಸತ್ಯ ನಾರಾಯಣ ದೇವರ ಪೂಜೆ, ಪುಣ್ಯಾಹ ಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೊಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.ಸಂಜೆ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೆರ್ಯ ರವರ ಆಶ್ರಯದಲ್ಲಿ ಮಕ್ಕಳ ತಂಡದಿAದ ಸಾಂಸ್ಕೃತಿಕ ಸಂಭ್ರಮ, ಬಳಿಕ ಶ್ರೀಮತಿ ಸಾಗರಿಕ ಕೋಟೆಯವರ ಶಿಷ್ಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಇವರ ಶಿಷ್ಯೆ ಕು.ವಿಭಾಶ್ರೀ ಗೌಡ ಇವರಶಿಷ್ಯೆಯಾರಿಂದ ಭರತ ನಾಟ್ಯ ಕಾರ್ಯಕ್ರಮ, ಶ್ರೀ ಲಕ್ಷ್ಮೀ ನಾರಾಯಣ ರೈ ಗುರಿಕಾನ ರವರ ನಿರ್ದೇಶನದಲ್ಲಿ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ನಡೆಯಿತು.


















ಮೇ 19 ರಂದು ಸೋಮವಾರ ಬೆಳಿಗ್ಗೆ5 ಗಂಟೆಗೆ ಗಣಪತಿ ಹವನ, ಬಳಿಕ ಶ್ರೀ ದೇವರ ಬಲಿ ಹೊರಟು ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಸಂಪ್ರೊಕ್ಷಣೆ, ತೀರ್ಥ ಪ್ರಸಾದ, ಅನ್ನ ಸಂರ್ಪಣೆನ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸವಣೂರು ಸೀತರಾಮ ರೈ, ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಸೇರಿಂದತೆ ಭಕ್ತಾಧಿಗಳು ಭಾಗವಹಿಸಿದ್ದರು.
(ವರದಿ; ಎ. ಎಸ್. ಎಸ್.)










