ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ಮೇ 27 ರಂದು ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ ಇಲಾಖಾಧಿಕಾರಿಗಳ ಜೊತೆ ಸಭೆ

ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಅಧ್ಯಕ್ಷತೆಯಲ್ಲಿ ಮೇ.21 ರಂದು
ನಡೆಯಿತು.

ಬಳಿಕ ಸಭೆಯಲ್ಲಿ ಕೊಡಗು ಗ್ರಾಮ ಮಟ್ಟದ ಗ್ರಾಮ ನೀರಿನ ಸಮಸ್ಯೆ, ಎನ್. ಡಿ.ಆರ್ ಎಫ್ ಮತ್ತು ಎಸ್. ಡಿ .ಆರ್ .ಎಫ್
ಮುಖಾಂತರ ಸಣ್ಣ ನೀರಾವರಿ ಯೋಜನೆಯಡಿ ಆಯಾ ಸ್ಥಳದಲ್ಲಿ ಹೂಳೆತ್ತುವ ಕಾರ್ಯ ಮತ್ತು ತಡೆಗೋಡೆ ನಿರ್ಮಾಣ ಕುರಿತು, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಯಡಿ ಮುಖಾಂತರ ಅರ್ಹ ಮನೆಯ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಜಾಗದ ಲಿಂಕ್ ಜೋಡಣೆ, ನಿರಾಶ್ರಿತರಿಗೆ ಕಂದಾಯ ಇಲಾಖೆಯಿಂದ ಸೂಕ್ತ ಸ್ಥಳಾವಕಾಶ ಒತ್ತು ವಳಿ ಗುರುತಿಸುವಿಕೆ ಮಾಡುವಂತೆ ಕಂದಾಯ ಇಲಾಖೆಗೆ ಮನವಿ ನೀಡುವ ಬಗ್ಗೆ, ಹಾಗೂ ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಡನೆ ಮೇ 27 ರಂದು ಸಭೆ ಮಾಡುವುದಾಗಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಪೂರ್ಣಿಮಾ ಅರೆಕಲ್ಲು, ಕಾರ್ಯದರ್ಶಿ ಸೀತಾರಾಮ, ಸದಸ್ಯರಾದ ಕುಮಾರ್ ಚಿದ್ಕಾರ್ , ಸುರೇಶ್ ಪಿ.ಎಲ್ , ನವೀನ್‌ಕುಮಾರ್ ಬಿ.ಎಂ, ನಿರ್ಮಲಾ ಭರತ್, ವಾಟರ್ ಮೇನ್, ಬಿಲ್ ಕಲೆಕ್ಟರ್, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.