ಸುಳ್ಯದ ಪಡ್ಪು ಬಳಿ ಸುಮಿತ್ರ ಇಂಜಿನಿಯರ್‌ರ ತೋಟಕ್ಕೆ ನಿನ್ನೆ ರಾತ್ರಿ ಆನೆ ದಾಳಿ ನಡೆಸಿದೆ. ಸುಮಾರು ೫೦ರಷ್ಟು ಅಡಿಕೆ ಗಿಡ, ಬಾಳೆ, ತೆಂಗು, ಜೀಗುಜ್ಜೆ ಮರ ಸಮೇತ ಪುಡಿಮಾಡಿದೆ. ಸುಮಾರು ೫೦ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಆನೆ ಹಿಂತಿರುಗುವಾಗ ವಿಜಯ ಪಡ್ಪುರವರ ತೋಟಕ್ಕೂ ದಾಳಿ ನಡೆಸಿ ಹಾನಿ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

























