ಅರಂತೋಡು ಗ್ರಾಮದ ಅಡ್ಕಬಳೆ – ಬನ ಎಂಬಲ್ಲಿ ಎರಡು ಹೆಬ್ಬಲಸು ಮರ ಕಡಿದು ಸಾಗಾಟಕ್ಕೆ ಯತ್ನ ನಡೆಸುತ್ತಿದ್ದಾರೆಂಬ ಮಾಹಿತಿ ಪಡೆದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾಳಿ ನಡೆಸಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.
ತುಷಾರ ಎಂಬವರ ಜಾಗ ದಲ್ಲಿದ್ದ ಹೆಬ್ಬಲಸು ಮರವನ್ನು ಅರಂತೋಡಿನ ಮುನೀರ್ ಎಂಬವರು ಕಡಿದು ಸಾಗಾಟಕ್ಕೆ ಯತ್ನ ನಡೆಸಿದರೆನ್ನಲಾಗಿದೆ. ಈ ಮಾಹಿತಿ ಅರಣ್ಯ ಇಲಾಖೆಯವರಿಗೆ ದೊರೆತು ಮೇ.27ರಂದು ಸ್ಥಳಕ್ಕೆ ಹೋಗಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದರು.















ತುಷಾರ್ ಮತ್ತು ಮುನೀರ್ ಮೇಲೆ ಕೇಸು ದಾಖಲಾಗಿದೆ. ತುಷಾರ್ ರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮುನೀರ್ ತಲೆಮರೆಸಿಕೊಂಡಿದ್ದಾರೆನ್ನಲಾಗಿದೆ.
ಇದರ ಮೌಲ್ಯ ಸುಮಾರು 1 ಲಕ್ಷದ 80 ಸಾವಿರ ಎಂದು ಅಂದಾಜಿಸಲಾಗಿದೆ.










