ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇವರು ಮಾರ್ಚ್ ಏಪ್ರಿಲ್ 2025 ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಥಮ ಬಿ.ಎ.ಎಂ.ಎಸ್ ವಿಭಾಗದಲ್ಲಿ 54 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಹಾಗೂ ದ್ವಿತೀಯ ಬಿ.ಎ.ಎಂ.ಎಸ್ ವಿಭಾಗದಲ್ಲಿ 58 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 16 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಥಮ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದಲ್ಲಿ 94 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಜಾದವ್ ಶ್ವೇತಾ ಗೋವಿಂದ್, ಚೌದ್ರಿ ಸಾಧನಾ ಬಾಬನ್, ವೀಣಾ ಅಜ್ಜಪ್ಪ ಗಿರಿಯಪ್ಪನವರ್, ತನುಷ ಎಸ್, ಶ್ರೇಯಾ ಜಿ ಎಸ್, ಮಾಯ ಎಂ, ಕವಡೆ ಶ್ರಾವಣಿ ಅಶೋಕ್, ನಿಮಿಷ ಆಯುಷಿ ಅಜಯ್ ಕುಮಾರ್, ಧನ್ಯಶ್ರೀ ಕೆ ಶೆಟ್ಟಿ, ಪುಣೆ ವಿಷಾಕ ಕೇದರ್ ಇವರುಗಳು ಮೊದಲ 10 ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.















ದ್ವಿತೀಯ ವರ್ಷದ ಬಿ.ಎ.ಎಂ.ಎಸ್ ಪದವಿ ಭಾಗದಲ್ಲಿ 83 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಮ್. ಆರ್. ಶೃತಿ, ಕಾವ್ಯ ಎಸ್ ಗೌಡ, ಎಂ ಎಂ ಲಾವಣ್ಯ, ಪವನ್ ಕುಮಾರ್ ಡಿ, ಸಂಪತ್ ಹಿರೇಮಠ್, ಚಿಂತನ್ ಎನ್ ಎಸ್, ದೀಕ್ಷಿತಾ ಎಂ ಎಸ್, ಮಧುರ ಜಿ ಎಸ್, ದಿವ್ಯರಾಣಿ ಕೋಪರಡೆ, ಚೇತನ್ ಕುಮಾರ್ ವಣರೊಟ್ಟಿ, ಎಸ್ ಭವಿತ್ ಶಂಕರ್ ಶೆಟ್ಟಿ ಇವರುಗಳು ಮೊದಲ 10 ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಅರ್ಕಿಟೆಕ್ಟ್ ಅಕ್ಷಯ್ ಕೆ ಸಿ, ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ ಸಿ, ಜೊತೆ ಕಾರ್ಯದರ್ಶಿಗಳಾದ ಶ್ರೀ. ಕೆ. ವಿ. ಹೇಮನಾಥ್,
ಕೋಶಾಧಿಕಾರಿಗಳಾದ ಡಾ. ಗೌತಮ್ ಗೌಡ, ಕೌಂನ್ಸಿಲ್ ಮೆಂಬರ್ ಗಳಾದ ಶ್ರೀ ಜಗದೀಶ್ ಅಡ್ತಲೆ, ಶ್ರೀಮತಿ ಮೀನಾಕ್ಷಿ ಕೆ.ಹೆಚ್., ಶ್ರೀ ಧನಂಜಯ ಮದುವೆಗದ್ದೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ. ಯವರು ಅಭಿನಂದಿಸಿದ್ದಾರೆ










