ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೃಷಿ ಸಲಕರಣೆ, ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಸಾಲಮೇಳ

0

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೃಷಿ ಸಲಕರಣೆ, ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಸಾಲಮೇಳ ಕಾರ್ಯಕ್ರಮವು ಯುವಕ ಮಂಡಲ ಮಡಪ್ಪಾಡಿ ಸಭಾಂಗಣದಲ್ಲಿ ಇಂದು(ಮೇ. 28) ನಡೆಯಿತು.

ಕಾರ್ಯಕ್ರಮವನ್ನು ಮಡಪ್ಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಪ್ರಗತಿಪರ ಕೃಷಿಕರಾದ ಏನ್. ಟಿ. ಹೊನ್ನಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಚಿನ್ ಬಳ್ಳಡ್ಕ ಉಪಾಧ್ಯಕ್ಷರು ಕೃಷಿ ಪ ಸಹಕಾರಿ ಸಂಘ ನಿಯಮಿತ ಮಡಪ್ಪಾಡಿ, ಸದಾನಂದ ಬಲ್ಕಜೆ ಅಧ್ಯಕ್ಷರು ಎಸ್‌.ಡಿ.ಎಂ.ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ, ಕಿರಣ್ ಕುಮಾರ್ ಶೀರಡ್ಕ ಅಧ್ಯಕ್ಷರು ಯುವಕ ಮಂಡಲ ಮಡಪ್ಪಾಡಿ, ವಿನ್ಯಾಸ್ ಪಾರೆಮಜಲು ಅಧ್ಯಕ್ಷರು ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ ಉಪಸ್ಥಿತರಿದ್ದರು.

ಇದೆ ಸಂದರ್ಭ ಕೃಷಿ ಸಲಕರಣೆಗಳ ಪ್ರದರ್ಶನ ವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಆರ್.ಕೆ ಲ್ಯಾಡರ್ಸ್‌ ಹಾಗೂ ಸಾಯ ಎಂಟರ್ಪ್ರೈಸಸ್ ಇದರ ಪ್ರತಿನಿಧಿಗಳು, ಸಹಕಾರಿ ಸಂಘದ ನಿದೇರ್ಶಕರುಗಳು, ಸದಸ್ಯರುಗಳು, ಕೃಷಿಕರು ಉಪಸ್ಥಿತರಿದ್ದರು.