














ಪೆರುವಾಜೆ – ಕೊಲ್ಯ ಸಂಪರ್ಕ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತಿದ್ದು ಇದರ ಬಗ್ಗೆ ತಾತ್ಕಾಲಿಕ ಪರಿಹಾರ ನೀಡಲು ಈ ಭಾಗದ ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷ ರ ಮೂಲಕ ಪಂಚಾಯಿತಿಗೆ ಗ್ರಾಮಸ್ಥರ ಪರವಾಗಿ ನಾಗೇಶ್ ಪೂಜಾರಿ ಕೊಲ್ಯ, ಇಬ್ರಾಹಿಂ ಅಂಬಟೆ ಗದ್ದೆ, ಶ್ರೀಮತಿ ಶಶಿರೇಖಾ ಮನವಿ ನೀಡಿದರು.
ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಹಿನಾಜ್, ಅಭಿವೃದ್ಧಿ ಅಧಿಕಾರಿ ತಿರುಮಲೇಶ್ವರ, ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಮಾಧವ ಮುಂಡಾಜೆ, ಶ್ರೀಮತಿ ರೇವತಿ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಗುಲಾಬಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










