
ಸುಳ್ಯ ಗಾಂಧಿನಗರ ಶಾಲಾ ಆವರಣದೊಳಗೆ ಹಾಕಲಾಗಿರುವ ವಿದ್ಯುತ್ ಕಂಬಗಳನ್ನು ತಕ್ಷಣ ತೆರವುಗೊಳಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಾಲೂಕು ಪಂಚಾಯತ್ ಆಡಳಿತಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಜಯಲಕ್ಷ್ಮಿ ಯವರು ಖಡಕ್ ಸೂಚನೆ ನೀಡಿದ್ದಾರೆ.
ಮೇ.29ರಂದು ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
















ಒಂದು ತಿಂಗಳ ಹಿಂದೆ ನನಗೆ ದೂರು ಬಂದಿದೆ. ನಾನು ಆಗಲೇ ತೆರವು ಮಾಡುವಂತೆ ಹೇಳಿದ್ದೆ. ಯಾಕೆ ತೆರವು ಮಾಡಿಲ್ಲ ಎಂದು ಮೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದರು.
“ಆ ಕಂಬಗಳನ್ನು ನಾವು ಹಾಕಿದ್ದಲ್ಲ ಎಂದು ಇಂಜಿನಿಯರ್ ಉತ್ತರಿಸಿದಾಗ, ನೀವು ಅಲ್ಲದಿದ್ದರೂ ನಿಮ್ಮ ಇಲಾಖೆಯ ಗುತ್ತಿಗೆದಾರರಲ್ಲವೇ. ಶಾಲಾ ಆವರಣದಲ್ಲಿ ಹಾಗೆ ಹಾಕಲು ಬಿಟ್ಟವರು ಯಾರು ಎಂದು ನೋಡಿ. ಮತ್ತುಆ ಗುತ್ತಿಗೆದಾರರಿಗೆ ತಿಳಿಸಿ ತಕ್ಷಣ ತೆರವು ಮಾಡಬೇಕು. ನಾಳೆಯೇ ನನಗೆ ವರದಿ ಮಾಡಿ ಎಂದು ಖಡಕ್ ಸೂಚನೆ ನೀಡಿದರು.
ಮಕ್ಕಳು ಓಡಾಡುವ ಪ್ರದೇಶದಲ್ಲಿ ಈ ರೀತಿ ಕಂಬಗಳನ್ನು ಇಡುವುದು ಸರಿಯಲ್ಲ ಎಂದು ಆಡಳಿತಾಧಿಕಾರಿ ಯವರು ತಿಳಿಸಿದರು.










