ಕೊಳಂಗಾಯ : ವಾರ್ಷಿಕ ತಂಬಿಲ

0

ಪೆರಾಜೆ ಗ್ರಾಮದ ಕೊಳಂಗಾಯ ಕುಟುಂಬದ ಐನ್ ಮನೆಯ ಸಮೀಪದಲ್ಲಿರುವ ಕುಟುಂಬಸ್ಥರ ದೈವಗಳ ಚಾವಡಿಯಲ್ಲಿ ವಾರ್ಷಿಕ ತಂಬಿಲ ಇತ್ತೀಚಿಗೆ ನಡೆಯಿತು.

ಶ್ರೀ ವೆಂಕಟ್ರಮಣ ದೇವರ ಮುಡಿಪು ಪೂಜೆ, ಉಳ್ಳಾಕುಲು ಗುಡಿಯಲ್ಲಿ ಹಾಲಿನ ಅರ್ಚನೆ, ಗುಳಿಗನ ಕಟ್ಟೆಯಲ್ಲಿ ಸಮ್ಮಾನ ನಡೆದು ಮಹಾವಿಷ್ಣುಮೂರ್ತಿ ಮತ್ತು ಧರ್ಮದೈವದ ಭೂತದ ಚಾವಡಿಯಲ್ಲಿ ಎಲ್ಲಾ ದೈವಗಳಿಗೆ ತಂಬಿಲ ಸೇವೆ,ಕುಟ್ಟಿ ಚಾತ ಬೈರಾವದಿ ಮೂರ್ತಿಗಳಿಗೆ ತಂಬಿಲ ಸೇವೆ ನಡೆದು ರಾತ್ರಿ ಐನ್ ಮನೆಯಲ್ಲಿ ಗುರು ಕಾರ್ನುರು, ಹಾಗೂ ಪಾಷಣಮೂರ್ತಿ ದೈವಗಳಿಗೆ ಅಗೆಲು ಸೇವೆ ನಡೆಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕುಟುಂಬ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.