ಕೊಡಗು ಸಂಪಾಜೆ ವಿದ್ಯುತ್ ಸಮಸ್ಯೆ : ಶಾಖಾಧಿಕಾರಿಗಳ ಕಚೇರಿ ಮತ್ತು ಪಾಲನೆ ಶಾಖಾ ಕಛೇರಿಗೆ ಶಾಸಕ ಎ .ಎಸ್ ಪೊನ್ನಣ್ಣರ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳು ಭೇಟಿ

0

ಇತ್ತೀಚಿನ ದಿನಗಳಲ್ಲಿ ಕೊಡಗು ಸಂಪಾಜೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯಿದ್ದು ಸಂಪಾಜೆ ಶಾಖಾಧಿಕಾರಿಗಳ ಕಚೇರಿ ಕಾರ್ಯ ಮತ್ತು ಪಾಲನೆ ಶಾಖೆ ಕಛೇರಿಗೆ ಮಾನ್ಯ ವಿರಾಜ ಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ .ಎಸ್ ಪೊನ್ನಣ್ಣ ರವರ ಕಾರ್ಯದರ್ಶಿ ರಾಮಚಂದ್ರ ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳಾದ ಮುತ್ತಣ್ಣ ರವರು ಮೇ 29 ರಂದು ಭೇಟಿ ನೀಡಿದರು.

ಸಂಪಾಜೆ ಜೆ.ಇ ಅನಿಲ್ ಅವರಿಂದ ವಿದ್ಯುತ್ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಡರು. ಆದಷ್ಟು ಬೇಗನೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೆಚ್ಚಿನ ಸಿಬ್ಬಂದಿಗಳ ನೇಮಿಸಿ , ವಿದ್ಯುತ್ ಸಮಸ್ಯೆಗಳನ್ನು ಸರಿ ಪಡಿಸುವಂತೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಚೆಸ್ಕಾಂ ನಾಮ ನಿರ್ದೇಶೀತ ಅಧ್ಯಕ್ಷರು/ಸದಸ್ಯರುಗಳಾದ ರಿತಿನ್ ಡೆಮ್ಮಲೆ, ಭಾರತಿ, ಕೊಡಗು ಪದ್ಮನಾಭ ಮಂಗಳಪಾರೆ, ಸಾವಿತ್ರಿ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು,ವಲಯ ಅಧ್ಯಕ್ಷರುಗಳಾದ ರವಿರಾಜ್ ಹೊಸೂರು, ಜಯರಾಮ ಪೆರುಮುಂಡ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಹನೀಫ್ ಎಸ್ ಪಿ, ವಿಜಯ ಕುಮಾರ್ ಕನ್ಯಾನ, ಮೋಹನ ಬಾಳೆಕಜೆ, ಸುಂದರ ಚೆಡಾವು,ತಿರುಮಲ ಸೋನಾ, ರುನೈಝ್ NSUI ,ಗ್ರಾಮಸ್ಥರು
ಉಪಸ್ಥಿತರಿದ್ದರು.