ಪೈಚಾರ್ :ಖುವ್ವತ್ತುಲ್ ಇಸ್ಲಾಂ ಮದ್ರಸ ಎಸ್ ಬಿ ಎಸ್ ವಾರ್ಷಿಕ ಮಹಾಸಭೆ

0

ನೂತನ ಸಮಿತಿ ರಚನೆ

ಪೈಚಾರ್ ಖುವ್ವತ್ತುಲ್ ಇಸ್ಲಾಂ ಮದ್ರಸ ಎಸ್ ಬಿ ಎಸ್ (ಸುನ್ನಿ ಬಾಲ ಸಂಘ) ಇದರ ವಾರ್ಷಿಕ ಮಹಾಸಭೆ ಪೈಚಾರ್ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಸ್ಥಳೀಯ ಮಸೀದಿ ಖತೀಬರಾದ ಶಮೀರ್ ಅಹ್ಮದ್ ನಹಿಮಿಯವರು
ದುವಾ ನೆರವೇರಿಸಸಿ
ಸಂಘಟನೆಯ ಮಹತ್ವವನ್ನು ವಿವರಿಸಿದರು.

ಸಭಾ ಕಾರ್ಯಕ್ರಮದ ‌ಉದ್ಘಾಟನೆಯನ್ನು
ಖುವ್ವತ್ತುಲ್ ಇಸ್ಲಾಂ ‌ಮದ್ರಸ ಮುಅಲ್ಲಿಮ್ ಜಝೀರ್ ಸಖಾಫಿಯವರು ನೆರವೇರಿಸಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಸದರ್ ಮುಅಲ್ಲಿಂ ಫೈಝಲ್ ಸಖಾಫಿ ಕರ್ನೂರ್,ಹಸನ್ ಮದನಿ ಮಂಡೆಕ್ಕೋಲು,ಹಾಗೂ
ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಪಿ,ಉಪಾಧ್ಯಕ್ಷ ‌ಇಬ್ರಾಹಿಂ ಎಸ್ ಎ,ಪ್ರಧಾನ ಕಾರ್ಯದರ್ಶಿ ಹನೀಫ್ ಪಿ ಕೆ,ಅಲ್ ಅಮೀನ್ ಯೂತ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬೂಸಾಲಿ‌‌, ಮದ್ರಸ ಉಸ್ತುವಾರಿ
ಮುಜೀಬ್ ಪೈಚಾರ್ ಮೊದಲಾದವರು ಉಪಸ್ಥಿತರಿದ್ದರು.

ನಂತರ 2025-26 ನೇ ಸಾಲಿನ ನೂತನ ಸಮಿತಿ ರಚಿಸಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯವರನ್ನು
ಚುನಾವಣೆಯ ಮೂಲಕ ಅಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತವನ್ನು ಚಲಾಯಿಸಿದ್ದರು.

ನೂತನ ಅಧ್ಯಕ್ಷರಾಗಿ
ಮುಹಮ್ಮದ್ ನಿಫಾಲ್,
ಪ್ರದಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಸಮದ್.
ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಅರ್ಫಾಝ್ ಕೆಪಿ,
ಮುಹಮ್ಮದ್ ‌ಶಾಝ್,ಮುಹಮ್ಮದ್ ರಝ್ಮಿಲ್ ಶಾಂತಿನಗರ,
ಜೊತೆ ಕಾರ್ಯದರ್ಶಿಗಳಾಗಿ
ಮುಹಮ್ಮದ್ ಸಹದ್ ಡಿಎಮ್,
ಮುಹಮ್ಮದ್ ನಿಶಾನ್ ಶಾಂತಿನಗರ,ಮುಹಮ್ಮದ್ ಶಮೀಮ್ ಬೆಟ್ಟಂಪಾಡಿ,
ಕೋಶಾಧಿಕಾರಿ ಯಾಗಿ
ಮುಹಮ್ಮದ್ ಸಹದ್ ಕೆಪಿ.
ಇವರುಗಳನ್ನು ಅಯ್ಕೆ ಮಾಡಲಾಯಿತು.
ಚುನಾವಣೆಯ ಉಸ್ತುವಾರಿಯನ್ನು ಮದ್ರಸ ಸದರ್ ಮುಅಲ್ಲಿಮ್ ‌ಫೈಝಲ್ ಸಖಾಫಿಯವರು ವಹಿಸಿದ್ದರು.ಫೈಝಲ್ ಸಖಾಫಿ ಸ್ವಾಗತಿಸಿ ‌
ನಿರೂಪಿಸಿದರು.