ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾಸಮಿತಿ,ಸಾರ್ವಜನಿಕ ಶ್ರೀದೇವತಾರಾಧನಾ ಸಮಿತಿಯ ಆಶ್ರಯದಲ್ಲಿ 57 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವವು ಆ.27 ರಿಂದ 31 ರ ತನಕ ನಡೆಯಲಿದ್ದು ಇದರ ಪ್ರಥಮ ಹಂತದ ಪೂರ್ವ ಸಿದ್ಧತಾ ಸಭೆಯು ದೇವತಾರಾಧನಾ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಕೆ.ಸಿ.ಯವರಅಧ್ಯಕ್ಷತೆಯಲ್ಲಿ ಕಲ್ಕುಡ ದೈವಸ್ಥಾನದ ವಠಾರದಲ್ಲಿ ಜೂ.12 ರಂದು ನಡೆಯಿತು.















5 ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವದ ಕಾರ್ಯಕ್ರಮಗಳ ರೂಪು ರೇಷೆಗಳ ಕುರಿತು ವಿಚಾರ ವಿಮರ್ಶೆ ನಡೆಸಲಾಯಿತು. ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಉತ್ಸವದ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಮಕ್ಕಳಿಗೆ ಭಜನಾ ಸ್ಪರ್ಧೆಯನ್ನು ಆಯೋಜಿಸುವ ಕುರಿತು ಸದಸ್ಯರ ಒಮ್ಮತದ ಅಭಿಪ್ರಾಯ. ವ್ಯಕ್ತವಾಯಿತು.
ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಪಿ.ಕೆ, ಗೌರವಾಧ್ಯಕ್ಷ ಕೆ.ಎಸ್. ಚಂದ್ರಶೇಖರ, ಮಧುಸೂದನ್ ಕುಂಭಕೋಡು, ಮಹಿಳಾ ಸಮಿತಿ ಅಧ್ಯಕ್ಷೆ
ಶ್ರೀಮತಿ ಲತಾ ಮಧುಸೂದನ್, ಕಾರ್ಯದರ್ಶಿ ಭರತ್ ಪಿ.ಯು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭರತ್ ಪಿ.ಯು ಕಾರ್ಯಕ್ರಮ ನಿರೂಪಿಸಿದರು.
ಜಂಟಿ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಭಾಗವಹಿಸಿದರು.










