ನಿವೃತ್ತ ಶಿಕ್ಷಕ ಮದುವೆಗದ್ದೆ ಶೇಷಪ್ಪ ಮಾಸ್ತರ್ ವಿಧಿವಶ

0


ಸುಳ್ಯ ಜೂನಿಯರ್ ಕಾಲೇಜ್ ನ ಪ್ರೌಢ ಶಾಲಾ ವಿಭಾಗದಲ್ಲಿ ಪದವೀಧರ ಸಹಾಯಕ ಅಧ್ಯಾಪಕರಾಗಿದ್ದಾಗ ನಿವೃತ್ತರಾಗಿದ್ದ ಉಬರಡ್ಕ ಗ್ರಾಮದ ಹಿರಿಯ ನಾಗರಿಕ ಹಾಗೂ ಕೃಷಿಕ ಮದುವೆಗದ್ದೆ ಶೇಷಪ್ಪ ಮಾಸ್ತರ್ ರವರು ಇಂದು ಮುಂಜಾನೆ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಅಡ್ತಲೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದ ಅವರು ಬಳಿಕ ಸುಳ್ಯದ ಗಾಂಧಿನಗರದಲ್ಲಿ ಪ್ರಾಥಮಿಕ ಶಾಲೆ ಆರಂಭಿಸಲು ಕಾರಣಕರ್ತರಾಗಿ ಶಾಲೆಯ ಆರಂಭದಿಂದ ಹಲವು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಪದವೀಧರ ಮುಖ್ಯೋಪಾಧ್ಯಾಯರಾಗಿ ಭಡ್ತಿಗೊಂಡು ಕುಂಬ್ರ ಸರಕಾರಿ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಪ್ರೌಢಶಾಲಾ ಅಧ್ಯಾಪಕರಾಗಿ ಭಡ್ತಿಗೊಂಡು, ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢ ಶಾಲಾವಿಭಾಗಕ್ಕೆ ಪದವೀಧರ ಸಹಾಯಕ ಅಧ್ಯಾಪಕರಾಗಿ ಬಂದಿದ್ದರು. ಅಲ್ಲಿ ಅವರು ಸೇವಾ ನಿವೃತ್ತಿ ಹೊಂದಿದ್ದರು.


ಪುತ್ರಿ ಶ್ರೀಮತಿ ಎಂ.ಎಸ್.ಗೀತಾ, ಪುತ್ರರಾದ ಎಂ.ಎಸ್.ಸುಬ್ರಹ್ಮಣ್ಯ, ಎಂ.ಎಸ್.ಓಂಪ್ರಕಾಶ್, ಅಳಿಯ ಸೊಸೆಯಂದಿರು, ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ.