ರಾಜ್ಯ ಸರಕಾರದ ಆದೇಶದಂತೆ ಪ್ರಾ.ಕೃ.ಪ.ಸ.ಸಂಘಗಳಿಂದ ಕೆಸಿಸಿ ಸಾಲ ಹೊಂದಿರುವ ರೈತರು ತಮ್ಮ ಸಾಲಗಳಿಗೆ ಆಧಾರವಾಗಿ ತಮ್ಮ ಭೂಹಿಡುವಳಿಗಳನ್ನು ಅಡಮಾನ ಮತ್ತು ನಮೂನೆ 3 ರಲ್ಲಿ ದಾಖಲು ಮಾಡುವುದನ್ನು ಕಡ್ಡಾಯಗೊಳಿಸಿದನ್ನು ತಡೆಹಿಡಿದು, ರೈತರು ತಮ್ಮ ಭೂದಾಖಲಾತಿಗಳನ್ನು ಸರಿಪಡಿಸಿಕೊಳ್ಳುವವರೆಗೆ ಕಾಲಾವಕಾಶ ಕೋರಿ, ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘದ ಅದ್ಯಕ್ಷ ಅನಂತ್ ಊರುಬೈಲು ರವರು ತಮ್ಮ ಸಂಸ್ಥೆಯ ನಿರ್ದೇಶಕರು ಮತ್ತು ಊರಿನ ಪ್ರಮುಖರೊಂದಿಗೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಶಾಸಕ ಎ.ಎಸ್.ಪೊನ್ನಣ್ಣರವರನ್ನು ವಿರಾಜಪೇಟೆ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.















ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ದಿನೇಶ್ ಸಣ್ಣಮನೆ, ರಾಮಮೂರ್ತಿ ಉಂಬಳೆ, ಪ್ರಮುಖರಾದ ಸೂರಜ್ ಹೊಸೂರು, ರವಿರಾಜ್ ಹೊಸೂರು, ಆದಂ ಸೆಂಟ್ಯಾರ್, ಸುರೇಶ್. ಪಿ.ಎಲ್ ,ಹನೀಫ್ ಮುಂತಾದವರು ಉಪಸ್ಥಿತರಿದ್ದರು.










