
ಶಾಲಾ ವಿದ್ಯಾರ್ಥಿ ನಾಯಕನನ್ನು ವಿದ್ಯಾರ್ಥಿಗಳು ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಲಾಯಿತು. ಸಂಸ್ಥೆಯಲ್ಲಿ ಮಾದರಿ ಮತಗಟ್ಟೆಯನ್ನು ರಚಿಸಿ ವಿದ್ಯಾರ್ಥಿಗಳು ಇ.ವಿ.ಯಂ ಮೂಲಕ ಮತ ಚಲಾಯಿಸಿದರು. ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ತಮ್ಮ ಗುರುತಿನ ಚೀಟಿಯನ್ನು ನೀಡಿ ಬೆರಳಿಗೆ ಶಾಯಿ ಹಾಕಿಸಿಕೊಂಡು ಬಹಳ ಮತ ಚಲಾಯಿಸಿದರು. ಸಂಸ್ಥೆಯ ಶಿಕ್ಷಕರು ಮತಗಟ್ಟೆ ಅಧಿಕಾರಿ ಹಾಗೂ ಶಿಕ್ಷಕ ಶಶಿಕಾಂತ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಚುನಾವಣೆ ಪ್ರಕ್ರಿಯೆಯಲ್ಲಿ ತಾಂತ್ರಿಕ ವ್ಯವಸ್ಥೆ ಯನ್ನು ಶಿಕ್ಷಕ ಯೋಗನಾಥ ಸಿದ್ದಪಡಿಸಿ ಸಹಕರಿಸಿದರು.
















ಪ್ರಜಾಪ್ರಭುತ್ವ ದ ರೀತಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಸಿದ ವಿದ್ಯಾರ್ಥಿ ಗೌರವ್ ಬಿ.ಡಿ ಹತ್ತನೇ ತರಗತಿ ಮುಖ್ಯಮಂತ್ರಿ ಆಗಿ ಆಯ್ಕೆಯಾದರು. ಹಾಗೆ ಉಪಮುಖ್ಯಮಂತ್ರಿಯಾಗಿ ಅಮೃತ ಸಿ 10ನೇ ತರಗತಿ ಆಯ್ಕೆಯಾದರು.










